ಮಗಳ ಕೊಲೆ ಬಳಿಕ ಪಾರ್ಟಿ ಮಾಡಿದ್ದ ತಾಯಿ ಇಂದ್ರಾಣಿ ಮುಖರ್ಜಿ..!
ಶೀನಾ ಬೊರಾ ಹತ್ಯೆ ನಡೆದ ಒಂದು ದಿನದ ಬಳಿಕ ಇಂದ್ರಾಣಿ ಮುಖರ್ಜಿ ಮತ್ತು ಸಂಜೀವ್ ಖನ್ನಾ ಅವರು ಪಾರ್ಟಿ ಮಾಡಿದ್ದ ಕುತೂಹಲಕಾರಿ ಅಂಶ ಸಿಬಿಐ ತನಿಖೆ ವೇಳೆ ಬೆಳಕಿಗೆ ಬಂದಿದೆ...

ಮುಂಬೈ: ಶೀನಾ ಬೊರಾ ಹತ್ಯೆ ನಡೆದ ಒಂದು ದಿನದ ಬಳಿಕ ಇಂದ್ರಾಣಿ ಮುಖರ್ಜಿ ಮತ್ತು ಸಂಜೀವ್ ಖನ್ನಾ ಅವರು ಪಾರ್ಟಿ ಮಾಡಿದ್ದ ಕುತೂಹಲಕಾರಿ ಅಂಶ ಸಿಬಿಐ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಶೀನಾ ಬೋರಾ ಹತ್ಯೆಯಾದ ಒಂದು ದಿನ ಬಳಿಕ ಅಂದರೆ 2012 ಏಪ್ರಿಲ್ 25ರ ರಾತ್ರಿ ಕೋಲ್ಕತ್ತಾದ ಕ್ರಿಕೆಟ್ ಆಂಡ್ ಫುಟ್ಬಾಲ್ ಕ್ಲಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ಶೀನಾ ಬೋರಾ ತಾಯಿ ಇಂದ್ರಾಮಿ ಮುಖರ್ಜಿ ಮತ್ತು ಅವರ ಎರಡನೇ ಪತಿ ಸಂಜೀವ್ ಖನ್ನಾ ಪಾಲ್ಗೊಂಡಿರುವುದನ್ನು ನಾನು ನೋಡಿದ್ದೇನೆ ಎಂದು ಸಂಜೀವ ಖನ್ನಾ ಅವರ ಆಪ್ತ ಗೆಳೆಯ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಂಜೀವ್ ಖನ್ನಾ ಅವರ ಆಪ್ತ ಗೆಳೆಯ ಮತ್ತು ಉದ್ಯಮಿ ಮಂಗಲೇಶ್ ಜಲನ್ ಅವರು ಈ ಹೇಳಿಕೆ ನೀಡಿದ್ದು, ತಮಗೆ ಸಂಜೀವ್ ಖನ್ನಾ ಸುಮಾರು ಮೂರು ದಶಕಗಳಿಂದ ಗೊತ್ತು. ಶೀನಾ ಬೊರಾ ಅವರ ಮೃತದೇಹವನ್ನು ಮರುದಿನ ಬೆಳಿಗ್ಗೆ ವಿಲೇವಾರಿ ಮಾಡಿದ ಬಳಿಕ ಇವರಿಬ್ಬರೂ ನಗರದಿಂದ ಹೊರಟು ಹೋಗಿದ್ದರು. 2012, ಏಪ್ರಿಲ್ 25ರಂದು ರಾತ್ರಿ ಇಂದ್ರಾಣಿ ಮತ್ತು ಸಂಜೀವ್ ಅವರನ್ನು ನಾನು ಸಿಸಿಆಂಡ್ ಎಫ್ಸಿ ಕ್ಲಬ್ ನಲ್ಲಿ ನೋಡಿದ್ದೆ ಎಂದು ಹೇಳಿದ್ದಾರೆ.
ಪಾರ್ಟಿ ವೇಳೆ ಸಂಜೀವ್ ಖನ್ನಾ ಓಲ್ಡ್ ಮಾಂಕ್ ರಮ್ ತೆಗೆದುಕೊಳ್ಳುತ್ತಿದ್ದರು. ಇಂದ್ರಾಣಿ ಅವರು ಬಿಯರ್ ತೆಗೆದುಕೊಳ್ಳುತ್ತಿದ್ದರು. ಇದಾದ ಬಳಿಕ ಏಪ್ರಿಲ್ 27ರಂದು ಇಂದ್ರಾಣಿ ಮುಖರ್ಜಿ ತಮ್ಮ ಪತಿ ಪೀಟರ್ ಮುಖರ್ಜಿ ಅವರನ್ನು ಪಿಕ್ ಅಪ್ ಮಾಡಲು ಗೋವಾಗೆ ತೆರಳಿದರು ಎಂದು ಜಲನ್ ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ. "ನಾನು 1987ರಿಂದ 88ರವೆಗೆ ಕ್ಲಬ್ ಸದಸ್ಯನಾಗಿದ್ದೆ. ಖನ್ನಾ ಅವರು ಕ್ಲಬ್ ನ ನಿಕಟ ಹಿರಿಯ ಸದಸ್ಯರಾಗಿದ್ದರು. ಖನ್ನಾ ಮೂಲಕ ನನಗೆ ಇಂದ್ರಾಣಿ ಪರಿಚಯವಾಯಿತು. ಇಂದ್ರಾಣಿಯವರೊಂದಿಗೆ ನಾನು ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಿಲ್ಲ. ಆದರೆ ಸಂಜೀವ್ ಖನ್ನಾ ಅವರೊಂದಿಗೆ ಬಹಳ ಆತ್ಮೀಯತೆ ಇತ್ತು ಎಂದು ಜಲನ್ ಸಿಬಿಐಗೆ ನೀಡಿರುವು ಸುಮಾರು ಒಂದು ಪುಟದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


