ಪಟೇಲರು ಪ್ರಧಾನಿ ಆಗಿದಿದ್ದರೆ ಭಾರತ ಪಾಕಿಸ್ತಾನವಾಗುತ್ತಿತ್ತು: ಕಂಚ ಇಲೈಯ್ಯ
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಈ ದೇಶದ ಪ್ರಧಾನಿಯಾಗುತ್ತಿದ್ದರೆ ಭಾರತ ಪಾಕಿಸ್ತಾನದ ರೀತಿ...

ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಈ ದೇಶದ ಪ್ರಧಾನಿಯಾಗುತ್ತಿದ್ದರೆ ಭಾರತ ಪಾಕಿಸ್ತಾನದ ರೀತಿ ಆಗುತ್ತಿತ್ತು ಎಂದು ದಲಿತ ಕಾರ್ಯಕರ್ತ ಮತ್ತು ಲೇಖಕ ಕಂಚ ಇಲೈಯ್ಯ ಹೇಳಿದ್ದಾರೆ.
ಅವರು ನಿನ್ನೆ ದೆಹಲಿಯಲ್ಲಿ ಟೈಮ್ಸ್ ಲಿಟ್ ಫೆಸ್ಟ್ ನಲ್ಲಿ ಮಾತನಾಡಿ, ಪಟೇಲ್ ಅವರು ಹಿಂದೂ ಮಹಾಸಭಾಕ್ಕೆ ಹತ್ತಿರವಾಗಿದ್ದರು. ಅವರು ಪ್ರಧಾನಿಯಾಗುತ್ತಿದ್ದರೆ ಅಂಬೇಡ್ಕರ್ ಅವರಿಗೆ ಸಂವಿಧಾನವನ್ನು ಬರೆದು ರಚಿಸಲು ಬಿಡುತ್ತಿರಲಿಲ್ಲ. ನಮ್ಮ ಪ್ರಜಾಪ್ರಭುತ್ವ ನಾಶವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಪಿ.ಎಲ್.ಪುಣಿಯಾ, ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ತಿಳಿಸುವ ಅವಕಾಶ ಪ್ರಜಾಪ್ರಭುತ್ವದಲ್ಲಿದೆ. ಕಂಚ ಇಲೈಯ್ಯ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಪ್ರತಿಯೊಬ್ಬರಿಗೂ ತಮ್ಮದೇ ಆದ ನಿಲುವು ಇರುವುದರಿಂದ ಒಬ್ಬ ನಾಯಕನನ್ನು ಮತ್ತೊಬ್ಬ ನಾಯಕನ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಾನು ಅವರ ಅಭಿಪ್ರಾಯಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.
"ಮನುಸ್ಮತಿಯಲ್ಲಿ ನಂಬಿಕೆ ಇರುವವರಿಗೆ ಮಾತ್ರವೇ ಪಟೇಲ್ ಅವರು ದೇಶದ ಸಂವಿಧಾನ ರಚಿಸುವ ಕೆಲಸವನ್ನು ವಹಿಸುತ್ತಿದ್ದರು. ಒಂದೊಮ್ಮೆ ಹಾಗೇನಾದರೂ ಆಗಿದ್ದಿದ್ದರೆ ನಾವು ಪಾಕಿಸ್ಥಾನದ ಹಾದಿಯಲ್ಲೇ ಸಾಗುತ್ತಿದ್ದೆವು ಮತ್ತು ನಮ್ಮ ಪ್ರಜಾಸತ್ತೆಯ ಪತನಗೊಳ್ಳುತ್ತಿತ್ತು. ಭಾರತವು ಸ್ವಾತಂತ್ರ್ಯ ದೊರಕಿದ ಮೊದಲ 17 ವರ್ಷಗಳಲ್ಲಿ ನಡೆದು ಬಂದದ್ದಕ್ಕೆ ವ್ಯತಿರಿಕ್ತವಾಗಿ ನಡೆದಿರುತ್ತಿದ್ದರೆ ಎಂದು ಇಳಯ್ಯ ಹೇಳಿದರು.
ಬಿಜೆಪಿ ಸದಸ್ಯ ಸುಧೀಂದ್ರ ಕುಲಕರ್ಣಿ ಮಾತನಾಡಿ, "ದೇಶದ ಪ್ರಥಮ ಗೃಹ ಸಚಿವರಾಗಿದ್ದ ಪಟೇಲ್ ಅವರು ಮಹೋನ್ನತರ ಪಟ್ಟಿಯಲ್ಲಿ ಅತ್ಯಂತ ಕೆಳಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಕನಿಷ್ಠ ಸಮಕಾಲೀನರೆನಿಸಿಕೊಳ್ಳುವ ಅವರು ಸಾಮಾಜಿಕ ಏಕತೆ, ಸಮಾನತೆ ಮತ್ತು ರಾಜಕೀಯ ಒಮ್ಮತಕ್ಕೆ ಯಾವುದೇ ಕಾಣಿಕೆ ನೀಡಿದವರಾಗಿ ಕಂಡು ಬರುವುದಿಲ್ಲ' ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


