13 ಎಸ್‍ಎಸ್‍ಬಿ ಯೋಧರ ಬಂಧನ, ಬಿಡುಗಡೆ
ಭಾರತ ಮತ್ತು ನೇಪಾಳ ನಡುವಿನ ತಿಕ್ಕಾಟ ಹಲವು ತಿರುವುಗಳನ್ನು ಪಡೆಯುತ್ತಿದ್ದು, ಭಾರತದ ಸಶಸ್ತ್ರ ಸೀಮಾ ಬಲದ 13 ಯೋಧರನ್ನು ನೇಪಾಳ ಬಂಧಿಸಿ ಬಿಡುಗಡೆ ಮಾಡಿದೆ. ನೇಪಾಳದ ಕೇಬಲ್ ಆಪರೇಟರ್‍ಗಳು ಭಾರತದ ಟಿವಿ ವಾಹಿನಿಗಳನ್ನು ಬ್ಲಾಕ್ ಮಾಡಿದ್ದಾರೆ...

ನವದೆಹಲಿ/ಕಠ್ಮಂಡು: ಭಾರತ ಮತ್ತು ನೇಪಾಳ ನಡುವಿನ ತಿಕ್ಕಾಟ ಹಲವು ತಿರುವುಗಳನ್ನು ಪಡೆಯುತ್ತಿದ್ದು, ಭಾರತದ ಸಶಸ್ತ್ರ ಸೀಮಾ ಬಲದ 13 ಯೋಧರನ್ನು ನೇಪಾಳ ಬಂಧಿಸಿ ಬಿಡುಗಡೆ ಮಾಡಿದೆ. ನೇಪಾಳದ ಕೇಬಲ್ ಆಪರೇಟರ್‍ಗಳು ಭಾರತದ ಟಿವಿ ವಾಹಿನಿಗಳನ್ನು ಬ್ಲಾಕ್ ಮಾಡಿದ್ದಾರೆ.
ನೇಪಾಳದ ಗಡಿಯೊಳಗೆ ಪ್ರವೇಶಿಸಿದ ಆರೋಪ ದಲ್ಲಿ 13 ಯೋಧರನ್ನು ನೇಪಾಳ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಯೋಧರಿಗೆ ಯಾವುದೇ ಗಾಯಗಳಾಗಿಲ್ಲ. ಈ ನಡುವೆ, ನೇಪಾಳಕ್ಕೆ ಭಾರತ ದಿಂದ ಸರಕು ಸಾಗಣೆಯನ್ನು ತಡೆದಿರುವುದನ್ನು ವಿರೋಧಿಸಿ ಕೇಬಲ್ ಆಪರೇಟರ್‍ಗಳು ಅನಿರ್ದಿಷ್ಟಾವಧಿಗೆ ಭಾರತದ ವಾಹಿನಿಗಳ ಪ್ರಸಾರ ತಡೆಹಿ ಡಿದಿದ್ದಾರೆ. ಸರಕು ಲಾರಿಗಳನ್ನು ತಡೆ ಹಿಡಿದಿರುವ ಮಾದ್ಹೇಸಿ ಗುಂಪುಗಳ ಮುಷ್ಕರ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


