ದೇಶ

ಕೊಲಿಜಿಯಂ ವಿರುದ್ಧ ಜೇಟ್ಲಿ ಕಿಡಿ

ಕೊಲಿಜಿಯಂ ವ್ಯವಸ್ಥೆ ಸಂವಿಧಾನ ವಿರೋಧಿ ಎಂದು ಹೇಳುವ ಮೂಲಕ ನ್ಯಾಯಾಂಗ ವ್ಯವಸ್ಥೆ ಹಾಗೂ ಶಾಸಕಾಂಗದ...

ಕೊಲಿಜಿಯಂ ವಿರುದ್ಧ ಜೇಟ್ಲಿ ಕಿಡಿ
ಅರುಣ್ ಜೇಟ್ಲಿ
Published On :
ನವದೆಹಲಿ: ಕೊಲಿಜಿಯಂ ವ್ಯವಸ್ಥೆ ಸಂವಿಧಾನ ವಿರೋಧಿ ಎಂದು ಹೇಳುವ ಮೂಲಕ ನ್ಯಾಯಾಂಗ ವ್ಯವಸ್ಥೆ ಹಾಗೂ ಶಾಸಕಾಂಗದ ನಡುವೆ ನಡೆದಿರುವ ಹಗ್ಗಜಗ್ಗಾಟಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ಹೊಸ ಆವೃತ್ತಿಯನ್ನು ಸೇರಿಸಿದ್ದಾರೆ. 
ರಾಜ್ಯಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಜೇಟ್ಲಿ, ನ್ಯಾಯಾಂಗ ವ್ಯವಸ್ಥೆ ಶಾಸಕಾಂಗದ ಅಧಿಕಾರವನ್ನು ಪಡೆಯಲಾಗದು ಎಂದಿದ್ದಾರೆ. ನ್ಯಾಯಾಂಗದ ಅತಿ ಸಕ್ರಿಯತೆಯು ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗಗಳ ಅಧಿಕಾರದಲ್ಲಿ ದುರ್ಬಲತೆ ಉಂಟುಮಾಡುತ್ತದೆ. 
ಹೀಗೆ ದುರ್ಬಲತೆಯು ತಲೆದೋರಿದರೆ ರಾಜ್ಯ ಅಥವಾ ಕೇಂದ್ರಗಳಿಂದ ಉಂಟಾಗುವಂಥದ್ದಲ್ಲ. ಧನಾತ್ಮಕ ಬೆಳವಣಿಗೆಯಾಗಿ ಕಾಣಿಸಿಕೊಂಡ ಈ ಸಕ್ರಿಯತೆ ಕೆಲವೊಮ್ಮೆ ಲಕ್ಷ್ಮಣ ರೇಖೆ ದಾಟಿಬಿಡುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.