ದೇಶ

'ದೀಪಾವಳಿ ಮಿಲನ'ದಲ್ಲಿ ತಾರತಮ್ಯ, ಸಮಾನತೆ ಬಗ್ಗೆ ಮಾತನಾಡಿದ ಮೋದಿ

ಭಾರತೀಯ ಹಬ್ಬಗಳು ಸಮಾಜಕ್ಕೆ ಹೊಸ ಸ್ಪೂರ್ತಿಯನ್ನು ನೀಡುತ್ತವೆ. ಅದರಲ್ಲಿ ಬೆಳಕಿನ ಹಬ್ಬ ದೀಪಾವಳಿಯೂ ಒಂದು.

'ದೀಪಾವಳಿ ಮಿಲನ'ದಲ್ಲಿ ತಾರತಮ್ಯ, ಸಮಾನತೆ ಬಗ್ಗೆ ಮಾತನಾಡಿದ ಮೋದಿ
ನರೇಂದ್ರ ಮೋದಿ
Published On :

ನವದೆಹಲಿ: ಭಾರತೀಯ ಹಬ್ಬಗಳು ಸಮಾಜಕ್ಕೆ ಹೊಸ ಸ್ಪೂರ್ತಿಯನ್ನು ನೀಡುತ್ತವೆ. ಅದರಲ್ಲಿ ಬೆಳಕಿನ ಹಬ್ಬ ದೀಪಾವಳಿಯೂ ಒಂದು. ಇಲ್ಲಿ ಯಾವುದೇ ತಾರತಮ್ಯ ಇಲ್ಲ. ಇದು ಸಮಾನತೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

'ದೀಪಾವಳಿ ಮಿಲನ'ದ ಅಂಗವಾಗಿ ಇಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕುಂಬ ಮೇಳ ಸೇರಿದಂತೆ ಹಲವು ಹಬ್ಬಗಳು ಸಮಾಜದಲ್ಲಿ ಜನರನ್ನೂ ಒಗ್ಗೂಡಿಸುತ್ತೇವೆ. ಇದು ಹಬ್ಬಗಳಿಗೆ ಇರುವ ಒಂದು ದೊಡ್ಡ ಶಕ್ತಿ ಎಂದರು.

ಈ ಕಾರ್ಯಕ್ರಮ ದೀಪಾವಳಿ ವೇಳೆ ನಡೆಯಬೇಕಿತ್ತು. ಆದರೆ ಬಿಡುವಿಲ್ಲದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ತಡವಾಯಿತು ಎಂದು ಪ್ರಧಾನಿ ಹೇಳಿದರು.

ಈ ವೇಳೆ ಕೆಲವು ಪತ್ರಕರ್ತರು ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರೆ, ಮತ್ತೆ ಕೆಲವರು ಮೋದಿಯೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.