ದೇಶ

ಸಚಿವ ಅನಿಲ್ ವಿಜ್ ಹಾಗೂ ಮಹಿಳಾ ಎಸ್ಪಿ ಸಂಗೀತಾ ಮಧ್ಯೆ ವಾಗ್ವಾದ

ಅಕ್ರಮ ಮದ್ಯ ತಡೆ ವಿಚಾರದಲ್ಲಿ ಆರೋಗ್ಯ ಸಚಿವ ಅನಿಲ್ ವಿಜ್​ ಹಾಗೂ ಮಹಿಳಾ ಎಸ್ಪಿ ಸಂಗೀತಾ ಕಾಲಿಯವರ ನಡುವೆ ಮಾತಿನ ಚಕಮಕಿ ನಡೆದಿದೆ...

ಸಚಿವ ಅನಿಲ್ ವಿಜ್ ಹಾಗೂ ಮಹಿಳಾ ಎಸ್ಪಿ ಸಂಗೀತಾ ಮಧ್ಯೆ ವಾಗ್ವಾದ
ಅನಿಲ್ ವಿಜ್, ಎಸ್ಪಿ ಸಂಗೀತಾ ಕಾಲಿಯ
Published On :
ಹರ್ಯಾಣ: ಅಕ್ರಮ ಮದ್ಯ ತಡೆ ವಿಚಾರದಲ್ಲಿ ಆರೋಗ್ಯ ಸಚಿವ ಅನಿಲ್ ವಿಜ್​ ಹಾಗೂ ಮಹಿಳಾ ಎಸ್ಪಿ ಸಂಗೀತಾ ಕಾಲಿಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಅಕ್ರಮ ಮದ್ಯೆ ತಡೆಗೆ ಏನು ಕ್ರಮಕೈಗೊಂಡಿದ್ದಿರಾ ಎಂದು ಮಹಿಳಾ ಎಸ್ಪಿಯನ್ನು ಸಚಿವರು ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರ ನೀಡಿದ ಎಸ್ಪಿ ಸಂಗೀತಾ, ಸ್ಥಳೀಯರ ದೂರಿನ ಮೇರೆಗೆ 2500 ಪ್ರಕರಣ ದಾಖಲಿಸಿದ್ದೇವೆ ಎಂದು ವಿವರಿಸಿದರು. ಇದಕ್ಕೆ ತೃಪ್ತರಾಗದ ಸಚಿವರು, ಇದು ಸಾಲದು, ನಿಮ್ಮ ಪೊಲೀಸ್​ ಇಲಾಖೆ ಕಾರ್ಯವೈಖರಿ ಸರಿಯಿಲ್ಲ ಎಂದು ತರಾಟೆಗೆ ತೆಗೆದುಕೊಂಡದರು. 
ಈ ಮಾತಿನಿಂದ ಕೆರಳಿದ ಎಸ್​ಪಿ ಸಂಗೀತಾ, ಮದ್ಯ ಮಾರಾಟಕ್ಕೆ ನಿಮ್ಮ ಇಲಾಖೆಯಿಂದಲೇ ಪರವಾನಿಗೆ ನೀಡಿದ್ದೀರಾ, ಮತ್ತೆ ಕ್ರಮಕೈಗೊಳ್ಳಿ ಎಂದು ನಮ್ಮನ್ನು ದಬಾಯಿಸುತ್ತೀರಾ ಅಂತ ಸಚಿವರೇ ತಿರುಗೇಟು ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಸಚಿವ ಅನಿಲ್​ ವಿಜ್​ ಎಸ್​ಪಿಯನ್ನು ಸಭೆಯಿಂದ ಹೊರ ಹೋಗಿ ಎಂದು ಗದರಿಸಿದ್ದಾರೆ. ಆದರೆ ಎಸ್​ಪಿ ಸಂಗೀತಾ ಸಭೆಯಿಂದ ಹೊರಗೆ ಹೋಗದ್ದರಿಂದ ಸಚಿವ ಅನಿಲ್​ ವಿಜ್​ಯೇ ಸಭೆ ಬಿಟ್ಟು ಹೊರಟು ಹೋಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.