ಅಸಹಿಷ್ಣುತೆ ಹೇಳಿಕೆ: ಆಮೀರ್ ಬೆಂಬಲಕ್ಕೆ ನಿಂತ ಅಪರ್ಣ ಸೇನ್
ಅಸಹಿಷ್ಣುತೆ ಕುರಿತಂತೆ ನಟ, ನಿರ್ದೇಶಕ ಆಮೀರ್ ಖಾನ್ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಅಪರ್ಣ ಸೇನ್

Published On :
ಕೊಲ್ಕತ್ತಾ: ಅಸಹಿಷ್ಣುತೆ ಕುರಿತಂತೆ ನಟ, ನಿರ್ದೇಶಕ ಆಮೀರ್ ಖಾನ್ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಅಪರ್ಣ ಸೇನ್ ಅವರು ಆಮೀರ್ ರನ್ನು ಬೆಂಬಲಿಸಿದ್ದಾರೆ.
ಓರ್ವ ಭಾರತೀಯನಾಗಿ ಆಮೀರ್ ಖಾನ್ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುವ ಮುಕ್ತ ಅವಕಾಶವಿದ್ದು, ಅಸಹಿಷ್ಣುತೆ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಅಪರ್ಣ ಸೇನ್ ಹೇಳಿದ್ದಾರೆ.
ಅಸಹಿಷ್ಣುತೆ ಹಿನ್ನೆಲೆ ಅವರು ಭಾರತವನ್ನು ತೊರೆಯುವುದಾಗಿ ಹೇಳಿಲ್ಲ. ಈ ಹೇಳಿಕೆ ಕುರಿತಂತೆ ಆಮೀರ್ ಖಾನ್ ಅವರೇ ಮುಂದೊಂದು ದಿನ ವಿವರಣೆ ನೀಡಲಿದ್ದಾರೆ ಎಂದರು.
ನಾನು ಗಮನಿಸಿದಂತೆ ಆಮೀರ್ ಖಾನ್ ಸೇರಿದಂತೆ ಯಾರೊಬ್ಬರು ಭಾರತ ಅಸಹಿಷ್ಣುತೆ ರಾಷ್ಟ್ರ ಎಂದು ಹೇಳಿಲ್ಲ. ಆದರೆ ಕೆಲವು ಕಡೆ ಅಸಹಿಷ್ಣುತೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


