ವ್ಯಾಪಾರಕ್ಕೆ ದೇವರ ಹೆಸರು ಬಳಸುವಂತಿಲ್ಲ: ಸುಪ್ರೀಂಕೋರ್ಟ್
``ದೇವರ ಹೆಸರು, ಪವಿತ್ರಗ್ರಂಥಗಳ ಹೆಸರನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಟ್ರೇಡ್‍ಮಾರ್ಕ್ ಮಾಡಿ ಕೊಳ್ಳುವಂತಿಲ್ಲ,'' ಎಂದು...

ನವದೆಹಲಿ: ``ದೇವರ ಹೆಸರು, ಪವಿತ್ರಗ್ರಂಥಗಳ ಹೆಸರನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಟ್ರೇಡ್‍ಮಾರ್ಕ್ ಮಾಡಿಕೊಳ್ಳುವಂತಿಲ್ಲ,'' ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
``ಕುರಾನ್, ಬೈಬಲ್, ಗುರು ಗ್ರಂಥ ಸಾಹಿಬ್, ರಾಮಾಯಣ ಮುಂತಾದ ಹಲವಾರು ಪವಿತ್ರ ಗ್ರಂಥಗಳ ಹೆಸರನ್ನು ಮಾರಾಟದ ವಸ್ತು ಅಥವಾ ಸೇವೆಗೆ ಬಳಸಿಕೊಳ್ಳಬಹುದೇ,'' ಎಂಬ ಪ್ರಶ್ನೆಗೆ ಸುಪ್ರೀಂ `ಇಲ್ಲ' ಎಂದಿದೆ. ಕಾನೂನಿನ ಪ್ರಕಾರ ವ್ಯಾಪಾರಕ್ಕೆ ದೇವ ದೇವತೆಗಳ ನೆರವು ಪಡೆಯುವಂತಿಲ್ಲ. ಇದು ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಿದೆ,'' ಎಂದು ಸುಪ್ರೀಂಕೋ ರ್ಟ್ ಪೀಠ ಹೇಳಿದೆ.
ಬಿಹಾರದ ಲಾಲ್‍ಬಾಬು ಪ್ರಿಯದರ್ಶಿ ಎಂಬ ಕಂಪನಿ ತನ್ನ ಅಗರಬತ್ತಿಗೆ `ರಾಮಾಯಣ' ಎಂದು ಹೆಸರಿಟ್ಟುಕೊಳ್ಳಲು ಬೌದ್ಧಿಕ ಹಕ್ಕು ಮನವಿ ಮಂಡಳಿಯ ಮುಂದೆ ಕೋರಿಕೊಂಡಿತ್ತು. ಇದನ್ನು ಅಮೃತ್ ಪಾಲ್ ಸಿಂಗ್ ಎಂಬುವರು ವಿರೋಧಿಸಿದ್ದರು. ಮಂಡಳಿ ಬಿಹಾರ ಕಂಪನಿಗೆ ಈ ಟ್ರೇಡ್‍ಮಾರ್ಕ್ ನೀಡಲು ನಿರಾಕರಿಸಿತ್ತು. ನ್ಯಾ.ರಂಜನ್ ಗೋಗೋಯ್ ಹಾಗೂ ನ್ಯಾ.ಎನ್ .ವಿ.ರಾಮಣ್ಣ ಅವರನ್ನೊಳಗೊಂಡ ಪೀಠ ಪ್ರಿಯದರ್ಶಿ ಸಂಸ್ಥೆಯ ವಿರುದ್ಧ ತೀರ್ಪಿತ್ತಿದೆ.
``ರಾಮಾಯಣ' ಎಂಬುದು ಧರ್ಮ ಗ್ರಂಥ. ಅದನ್ನು ಟ್ರೇಡ್ ಮಾರ್ಕ್ ರೀತಿ ಬಳಸುವುದು ವಾಣಿಜ್ಯ ವಹಿವಾಟು ಕಾಯಿದೆ ಪ್ರಕಾರ ಸರಿಯಲ್ಲ ಎಂದು ಪೀಠ 16 ಪುಟಗಳ ತೀರ್ಪಿನಲ್ಲಿ ಹೇಳಿದೆ. ಅಗರಬತ್ತಿ ಪೊಟ್ಟಣದ ಮೇಲೆ ಮುದ್ರಿಸಲಾಗಿರುವ ರಾಮ, ಲಕ್ಷ್ಮಣ, ಸೀತೆಯರ ಚಿತ್ರಕ್ಕೂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


