ಏನೇ ಬಂದರೂ ಮುಸ್ಲಿಮರು ಭಾರತ ಬಿಡುವುದಿಲ್ಲ: ಅಸಾದುದ್ದೀನ್ ಓವೈಸಿ
ಭಾರತೀಯ ಮುಸ್ಲಿಮರೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಿದ್ದು, ಏನೇ ಬಂದರೂ ನಾವು ಭಾರತವನ್ನು ಬಿಡುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಮಂಗಳವಾರ ಹೇಳಿದ್ದಾರೆ...

ಹೈದರಾಬಾದ್: ಭಾರತೀಯ ಮುಸ್ಲಿಮರೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಿದ್ದು, ಏನೇ ಬಂದರೂ ನಾವು ಭಾರತವನ್ನು ಬಿಡುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಮಂಗಳವಾರ ಹೇಳಿದ್ದಾರೆ.
ದೇಶದಲ್ಲಿ ಇದೀಗ ಸಂಘ ಪರಿವಾರ ಹಾಗೂ ಇತರೆ ಶಕ್ತಿಗಳು ತೀವ್ರ ಅಸಹಿಷ್ಣುತೆಯನ್ನು ಹುಟ್ಟುಹಾಕುತ್ತಿವೆ. ಆದರೆ, ನಾವು ದೇಶಕ್ಕಾಗಿ ಹೋರಾಡಲು ಸಿದ್ಧರಿದ್ದೇವೆ. ಅಸಹಿಷ್ಣುತೆಯಿಂದ ನಮ್ಮ ಹೃದಯ ಹಾಗೂ ಮಿದುಳಿನಲ್ಲಿ ಭಯ ಹುಟ್ಟಿಸಲು ಸಾಧ್ಯವಿಲ್ಲ. ಏಕೆಂದರೆ ಇದು ನಮ್ಮ ದೇಶ. ನಾವು ಎಲ್ಲಿಯವರೆಗೂ ಈ ಭೂಮಿಯ ಮೇಲೆ ಬದುಕಿರುತ್ತೇವೆಯೇ ಅಲ್ಲಿಯವರೆಗೂ ನಾವು ಭಾರತದಲ್ಲೇ ಇರುತ್ತೇವೆ. ನಮಗೆ ಭಾರತದ ಮುಸ್ಲಿಮರು ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಮುಸ್ಲಿಮರು ಭಾರತದಲ್ಲಿ ತಮ್ಮ ಹಕ್ಕು ಕಂಡುಕೊಳ್ಳಲು ಇಂದಿಗೂ ಹೋರಾಟ ನಡೆಸುತ್ತಲೇ ಇದ್ದಾರೆ. ಸಂವಿಧಾನ ನಮಗೆ ನೀಡಿರುವುದನ್ನು ಯಾರಿಂದರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾವು ಭಾರತೀಯರು ಹುಟ್ಟಿನಿಂದ ಮಾತ್ರವೇ ಅಲ್ಲ ನಮ್ಮ ಆಯ್ಕೆಯಲ್ಲಿಯೂ ಕೂಡ. ನಾವು ಈಗಾಗಲೇ ಸಾಕಷ್ಟು ಕಷ್ಟ ಹಾಗೂ ಗಲಭೆಗಳನ್ನು ನೋಡಿದ್ದೇವೆ. ಬಾಬ್ರಿ ಮಸೀದಿ ಗಲಭೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಸಂವಿಧಾನ ನೀಡಿರುವ ಹಕ್ಕು ಇಂದಿಗೂ ಮುಸ್ಲಿಮರಿಗೆ ಸಿಕ್ಕಿಲ್ಲ. ಆದರೆ, ಇದು ನಮ್ಮ ದೇಶವೇ. ನಮಗೆ ನೀಡಿರುವ ಹಕ್ಕು ಹಾಗೂ ಸ್ಥಾನ ಪಡೆಯಲು ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


