ಮುಸ್ಲಿಂರಿಗೆ ಭಾರತಕ್ಕಿಂತ ಉತ್ತಮ ರಾಷ್ಟ್ರ ಸಿಗಲ್ಲ: ಶಹನವಾಜ್ ಹುಸೇನ್
ಮುಸ್ಲಿಂರಿಗೆ ಭಾರತಕ್ಕಿಂತ ಉತ್ತಮ ದೇಶ ಸಿಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ...

ನವದೆಹಲಿ: ಮುಸ್ಲಿಂರಿಗೆ ಭಾರತಕ್ಕಿಂತ ಉತ್ತಮ ದೇಶ ಸಿಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ.
ಭಾರತ ಬಿಟ್ಟ ಬಳಿಕ ಎಲ್ಲಿಗೆ ಹೋಗುತ್ತೀರಿ ಎಂದು ಪ್ರಶ್ನಿಸಿರುವ ಶಹನವಾಜ್ ಹುಸೇನ್, ಜಗತ್ತಿನಲ್ಲಿ ಎಲ್ಲೇ ಹೋದರೂ ನಿಮಗೆ ಅಸಹಿಷ್ಣುತೆ ಎದುರಾಗುತ್ತದೆ ಎಂದಿದ್ದಾರೆ.
ಆಮೀರ್ ಖಾನ್ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು. ಆದರೆ, ಅವರಿಗೆ ಪ್ರೀತಿ, ಗೌರವ ಮತ್ತು ಸಂಪತ್ತನ್ನು ನೀಡಿದ್ದು ಇದೇ ದೇಶ ಎಂಬುದು ನೆನಪಿನಲ್ಲಿರಲಿ. ಮುಸ್ಲಿಂರಿಗೆ ಭಾರತಕ್ಕಿಂತ ಒಳ್ಳೆಯ ದೇಶ ಸಿಗುವುದಿಲ್ಲ" ಎಂದು ಶಹನವಾಜ್ ಹುಸೇನ್ ತಿಳಿಹೇಳಿದ್ದಾರೆ.
ಭಾರತದಲ್ಲಿ ಅಸಹಿಷ್ಣುತೆಯ ವಾತಾವರಣ ಹೆಚ್ಚಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ನಟ ಆಮೀರ್ ಖಾನ್ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


