ಜಿಎಸ್‍ಟಿ ಬದಲಿಗೆ ಸರ್ಕಾರ ಒಪ್ಪಿಗೆ?
ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‍ಟಿ) ವಿಧೇಯಕ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆನಡೆಯುತ್ತಿರುವ ತಿಕ್ಕಾಟಕ್ಕೆ ಸಂಸತ್ತಿನ...

Published On :
ನವದೆಹಲಿ: ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‍ಟಿ) ವಿಧೇಯಕ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆನಡೆಯುತ್ತಿರುವ ತಿಕ್ಕಾಟಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶ ನಕ್ಕೂ ಮೊದಲೇ ಅಂತ್ಯ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜಿಎಸ್‍ಟಿ ವಿಧೇಯಕಕ್ಕೆ ಸಂಬಂಧಿಸಿ ಕಾಂಗ್ರೆಸ್ ನೀಡಿರುವ ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು `ಎನ್‍ಡಿಟಿವಿ' ವರದಿ ಮಾಡಿದೆ. ಜಿಎಸ್‍ಟಿ ವಿಧೇಯಕಕ್ಕೆ ಚಳಿಗಾಲದ ಅಧಿವೇಶನದಲ್ಲೇ ಒಪ್ಪಿಗೆ ಪಡೆಯಬೇಕೆಂಬುದು ಬಿಜೆಪಿ ಚಿಂತನೆ. ಆರ್ಥಿಕಸುಧಾರಣೆಗಳ ಪ್ರಮುಖ ಭಾಗವಾಗಿರುವ ಈ ವಿಧೇಯಕಕ್ಕೆ ಒಪ್ಪಿಗೆ ಪಡೆಯುವುದು ಸರ್ಕಾರಕ್ಕೆ ಅನಿವಾರ್ಯ. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಹಣಕಾಸುಸಚಿವ ಅರುಣ್ ಜೇಟ್ಲಿ ಮತ್ತು ಕಂದಾಯ ಕಾರ್ಯ ದರ್ಶಿ ಹಸ್ಮುಖ್ ಮತ್ತಿತರ ಹಣಕಾಸು ಸಚಿವಾಲಯದ ಅಧಿಕಾರಿಗಳ ಮುಂದೆ ಜಿಎಸ್‍ಟಿ ದರ ಇಳಿಕೆ ಸಂಬಂಧ ಸರ್ಕಾರದ ಯೋಜನೆಯನ್ನು ಮಂಡಿಸಿದ್ದಾರೆ.
ಡಿಸೆಂಬರ್‍ನಲ್ಲಿ ಮಂಡನೆ : ರೆವೆನ್ಯೂ ನ್ಯೂಟ್ರಲ್ ಜಿಎಸ್‍ಟಿ ರೇಟ್‍ಗೆ ಸಂಬಂಧಿಸಿದ ಉನ್ನತ ಸಮಿತಿಯು ತನ್ನ ವರದಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ಸರ್ಕಾರಕ್ಕೆ
ಸಲ್ಲಿಸಲಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


