ಹಕ್ಕಿಗಳಿಗೆ ಹಾರುವ ಹಕ್ಕು ಇದೆಯೇ?
ಹಕ್ಕಿಗಳಿಗೂ ಮೂಲಭೂತ ಹಕ್ಕು ಇದೆಯೇ? ಹೌದು ಹೀಗೆ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ...

ನವದೆಹಲಿ: ಹಕ್ಕಿಗಳಿಗೂ ಮೂಲಭೂತ ಹಕ್ಕು ಇದೆಯೇ? ಹೌದು ಹೀಗೆ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.
``ಹಕ್ಕಿಗಳನ್ನು ಪಂಜರದಲ್ಲಿಡುವುದರಿಂದ ಹಾರಾಡುವ ಅವುಗಳ ಸ್ವಾತಂತ್ರ್ಯವನ್ನು ಉಲ್ಲಂಘಿಸಿಂದತಾಗುತ್ತದೆಯೇ,'' ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆಗಾಗಿ ಕೈಗೆತ್ತಿಕೊಂಡಿದೆ ಎಂದು ಶನಿವಾರ `ದ ಟೈಮ್ಸ್ ಆಫ್ಇಂಡಿಯಾ' ವರದಿ ಮಾಡಿದೆ.
``ಹಕ್ಕಿಗಳಿಗೂ ಮುಕ್ತವಾಗಿ ಆಕಾಶದಲ್ಲಿ ಹಾರಾಡುವ ಮೂಲಭೂತ ಹಕ್ಕಿದೆ. ಹಕ್ಕಿಗಳ ನ್ನು ಪಂಜರದಿಂದ ಕೂಡಿಹಾಕದೆ ಅವುಗಳ ಸ್ವಾತಂತ್ರ್ಯವನ್ನು ಗೌರವಿಸಬೇಕು,'' ಎಂದು ಗುಜರಾತ್ ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂತಿರ್ ಎಚ್.ಎಲ್. ದತ್ತು, ನ್ಯಾ. ಶಿವಕೀರ್ತಿ ಸಿಂಗ್ ಮತ್ತು ನ್ಯಾ.ಅಮಿತಾವಾರಾಯ್ ಅವರಿದ್ದ ಪೀಠ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ. ಬೀದಿ ವ್ಯಾಪಾರಿಗಳು 494 ಹಕ್ಕಿಗಳನ್ನು ಪಂಜರದಲ್ಲಿ ಕೂಡಿಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಈ ತೀರ್ಪು ನೀಡಿತ್ತು. ಬಹುತೇಕ ಪ್ರಕರಣಗಳಲ್ಲಿ ಹಕ್ಕಿಗಳ ರೆಕ್ಕೆ ಮತ್ತು ಬಾಲಗಳನ್ನು ಕತ್ತರಿಸಲಾಗುತ್ತಿತ್ತು.
ಕೆಲವು ಪ್ರಕರಣಗಳಲ್ಲಂತೂ ಅವುಗಳು ಹಾರದಂತೆ ರೆಕ್ಕೆಗೆ ಗೋಂದು ಹಾಕಿ ಅಂಟಿಸಲಾಗುತ್ತಿತ್ತು. ಕಾಲಿಗೆ ಭಾರವಾದ ರಿಂಗ್‍ಗಳನ್ನೂ ಹಾಕಲಾಗಿತ್ತು. ಇದು ಬಹುತೇಕ ಹಕ್ಕಿ ಬಜಾರ್‍ಗಳಲ್ಲಿ ಮಾಮೂಲಿ. ಈ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ ``ಹಕ್ಕಿಗಳನ್ನು ಈ ರೀತಿ ಬಂಧಿಸಿಡುವುದು ಅಪರಾಧ. ಅವುಗಳಿಗೂ ನೈಸರ್ಗಿಕ ವಾತಾವರಣದಲ್ಲಿ ಮುಕ್ತ ಆಕಾಶದಲ್ಲಿ ಹಾರಾಡುವ ಸ್ವಾತಂತ್ರ್ಯವಿದೆ. ಈ ಹಕ್ಕಿಗಳಿಗೆ ಯಾವುದೇ ನೋವಾಗದಂತೆ ನೋಡಿಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯ,'' ಎಂದು ಅಭಿಪ್ರಾಯಪಟ್ಟಿತ್ತು.
ಹೈಕೋರ್ಟ್‍ನ ಈ ತೀರ್ಪನ್ನು ಪ್ರಶ್ನಿಸಿ ಪ್ರಾಣಿ ಪ್ರೇಮಿ ಸಂಘವೊಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಗುಜರಾತ್ ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿರುವ ಈ ಸಂಘ, ``ಪ್ರಾಣಿಗಳ ಕಾಯ್ದೆ ಹಾಗೂ ಅರಣ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಾಣಿಗಳ ಮೇಲಿನ ಹಿಂಸೆ ತಡೆ ನಿಬಂಧನೆಗೆ ವಿರುದ್ಧವಾಗಿದೆ,'' ಎಂದು ವಾದಿಸಿದೆ. ಹಕ್ಕಿಗಳನ್ನು ಪಂಜದಲ್ಲಿಡುವುದು ಮತ್ತು ಪ್ರಾಣಿಗಳ ವ್ಯಾಪಾರವನ್ನು ನಿಷೇಧಿಸಬಾರದು ಎಂದು ಒತ್ತಾಯಿಸಿದೆ. ಗುಜರಾತ್ ಕೋಟ್ರ್ ನ ಈ ತೀರ್ಪಿನಿಂದಾಗಿ ವ್ಯಾಪಾರಿಗಳಿಗೆ ವಿನಾ ಕಾರಣ ಕಿರುಕುಳ ಆಗುತ್ತಿದೆ ಎಂದು ಎನ್ ಜಿಒ ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


