ದೇಶ

ಅಲ್- ಖೈದಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿರುವುದು ನಮ್ಮ ಮಗ: ಕಾಶ್ಮೀರಿ ಕುಟುಂಬದ ಸ್ಪಷ್ಟನೆ

ಪಾಕಿಸ್ತಾನದ ವಝೀರಿಸ್ತಾನ್ ನಲ್ಲಿ ಇತ್ತೀಚೆಗೆ ಅಮೆರಿಕಾ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಅಲ್- ಖೈದಾ ಉಗ್ರ ಸಂಘಟನೆಯ ಸಕ್ರಿಯ ಉಗ್ರ ತಮ್ಮ ಮಗ ಎಂದು ದಕ್ಷಿಣ ಕಾಶ್ಮೀರದ ಕುಟುಂಬವೊಂದು ಸ್ಪಷ್ಟಪಡಿಸಿದೆ.

ಅಲ್- ಖೈದಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿರುವುದು ನಮ್ಮ ಮಗ: ಕಾಶ್ಮೀರಿ ಕುಟುಂಬದ ಸ್ಪಷ್ಟನೆ
ಅಲ್- ಖೈದಾ ಉಗ್ರ
Published On :

ಶ್ರೀನಗರ: ಪಾಕಿಸ್ತಾನದ ವಝೀರಿಸ್ತಾನ್ ನಲ್ಲಿ ಇತ್ತೀಚೆಗೆ ಅಮೆರಿಕಾ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಅಲ್- ಖೈದಾ ಉಗ್ರ ಸಂಘಟನೆಯ ಸಕ್ರಿಯ ಉಗ್ರ ತಮ್ಮ ಮಗ ಎಂದು ದಕ್ಷಿಣ ಕಾಶ್ಮೀರದ ಕುಟುಂಬವೊಂದು ಸ್ಪಷ್ಟಪಡಿಸಿದೆ.
ಅನಂತ್ ನಾಗ್ ಜಿಲ್ಲೆಯ ನಾಗಂ ಗ್ರಾಮದ ಕುಟುಂಬವೊಂದರ ಸದಸ್ಯರ ಪ್ರಕಾರ, ಅಲ್- ಖೈದಾ ಉಗ್ರರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿರುವುದು ತಮ್ಮ ಕುಟುಂಬಕ್ಕೆ ಸೇರಿದ ಮುಹಮ್ಮದ್ ಅಶ್ರಫ್ ದಾರ್ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ದಾರ್ ನ ಸಹೋದರ ನಾಜಿರ್ ಅಹಮದ್, ಅಲ್- ಖೈದಾ ಉಗ್ರ ಸಂಘಟನೆ ಮಾಧ್ಯಮ ಮುಖ್ಯಸ್ಥನೊಬ್ಬ ಕಳೆದ ವಾರ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತನ್ನ ಸಹೋದರ ಮುಹಮ್ಮದ್ ಅಶ್ರಫ್ ನನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ. 
ಜನವರಿಯಲ್ಲಿ ಅಮೆರಿಕಾ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮುಹಮ್ಮದ್ ಅಶ್ರಫ್ ಮೃತಪಟ್ಟಿದ್ದ. ಮೃತಪಟ್ಟ ಉಗ್ರನನ್ನು ಹೊಗಳಿದ್ದ ವಿಡಿಯೋದಲ್ಲಿ ಮುಹಮ್ಮದ್ ಅಶ್ರಫ್ ನನ್ನು ತೋರಿಸಲಾಗಿದೆ. ವಿಡಿಯೋದಲ್ಲಿ ಮೃತಪಟ್ಟ ಯುವಕ ಕಾಶ್ಮೀರದ ಇಸ್ಲಾಮಾಬಾದ್ ಪ್ರಾಂತ್ಯಕ್ಕೆ ಸೇರಿದವನು ಎಂದು ತಿಳಿಸಲಾಗಿದೆ.
ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯನ್ನು ಕಾಶ್ಮೀರ ಕಣಿವೆಯ ಇಸ್ಲಾಮಾಬಾದ್ ಜಿಲ್ಲೆ ಎಂದೂ ಹೇಳಲಾಗುತ್ತದೆ. ಮುಹಮ್ಮದ್ ಅಶ್ರಫ್ ನನ್ನು ಚಿತ್ರೀಕರಿಸಲಾಗಿರುವ ವಿಡಿಯೋ ತೋರಿಸುವಂತೆ ಪೊಲೀಸರು ಅಶ್ರಫ್ ನ ಕುಟುಂಬ ಸದಸ್ಯರಿಗೆ ಸೂಚನೆ ನೀಡಿದ್ದರು. 2001 ರಲ್ಲಿ 15 ವರ್ಷದ ಯುವಕನಾಗಿದ್ದ ಅಶ್ರಫ್ ಶಸ್ತ್ರಾಸ್ತ್ರ ತರಬೇತಿ ಪಡೆಯಲು ಹಿಜ್ಬುಲ್- ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾಗಿ ಪಾಕ್ ಆಡಳಿತವಿರುವ ಕಾಶ್ಮೀರಕ್ಕೆ ತೆರಳಿದ್ದ ಎಂದು ಆತನ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.