ದೇಶ

ಭಯೋತ್ಪಾದಕರಿಗೆ ಹಣಕಾಸು ನೆರವು: ಭಾರತದಿಂದ 37 ಖಾತೆಗಳು ರದ್ದು, 2 .12 ಕೋಟಿ ಜಪ್ತಿ

ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದಡಿ 37 ಸಂಸ್ಥೆಗಳು ಹಾಗೂ ಕೆಲವು ವಯಕ್ತಿಕ ಖಾತೆಗಳನ್ನು ರದ್ದುಗೊಳಿಸಿರುವ ಭಾರತ ಸರ್ಕಾರ 2 .12 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದೆ.

ಭಯೋತ್ಪಾದಕರಿಗೆ ಹಣಕಾಸು ನೆರವು: ಭಾರತದಿಂದ 37 ಖಾತೆಗಳು ರದ್ದು, 2 .12 ಕೋಟಿ ಜಪ್ತಿ
2 .12 ಕೋಟಿ ಜಪ್ತಿ(ಸಂಗ್ರಹ ಚಿತ್ರ)
Published On :

ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಡಿ 37 ಸಂಸ್ಥೆಗಳು ಹಾಗೂ ಕೆಲವು ವಯಕ್ತಿಕ ಖಾತೆಗಳನ್ನು ರದ್ದುಗೊಳಿಸಿರುವ ಭಾರತ ಸರ್ಕಾರ 300 ,000 ಯುರೋಗಳನ್ನು( 2 .12 ) ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದೆ.   
ಹಣಕಾಸು ಕ್ರಿಯೆ ಕಾರ್ಯಪಡೆ(ಎಫ್ಎಟಿಎಫ್) ಗೆ ಭಾರತ ಸರ್ಕಾರ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಸಂಸ್ಥೆಗಳು ಹಾಗೂ ವಯಕ್ತಿಕ ಖಾತೆಗಳ ಬಗ್ಗೆ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಇತ್ತೀಚೆಗಷ್ಟೇ ನಡೆದ ಜಿ-20 ಶೃಂಗಸಭೆಯಲ್ಲಿ ಮಂಡಿಸಲಾಗಿತ್ತು. ಸಭೆಯಲ್ಲಿ ವರದಿ ಮಂಡನೆಯಾಗಿದೆಯಾದರೂ ಸಂಸ್ಥೆಗಳ ಹೆಸರು ಅಥವಾ ವಯಕ್ತಿಕ ಖಾತೆದಾರರ ಹೆಸರನ್ನು ಎಫ್ಎಟಿಎಫ್ ಬಹಿರಂಗಪಡಿಸಿರಲಿಲ್ಲ.  
2015 ರ ಆಗಸ್ಟ್ ವರೆಗೆ  ಭಾರತ ಸ್ಥಗಿತಗೊಳಿಸಿರುವ ಭಯೋತ್ಪಾದಕ ಸಂಘಟನೆಗಳಿಗೆ ಸರಬರಾಜಾಗುತ್ತಿದ್ದ ಹಣ ಹವಾಲಾ ಹಾಗೂ ನಕಲಿ ನೋಟುಗಳ ಚಲಾವಣೆಯಿಂದ ಬಂದ ಅಕ್ರಮ ಆದಾಯದ ಮೂಲದ್ದಾಗಿದೆ ಎಂದು ತಿಳಿದುಬಂದಿದೆ.
ಹವಾಲಾ ಹಾಗೂ ನಕಲಿ ನೋಟುಗಳ ಚಲಾವಣೆಯಿಂದ ಬಂದ ಆದಾಯವನ್ನು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಜಮಾತ್-ಉದ್- ದವಾ ಸಂಘಟನೆ ಸೇರಿದಂತೆ ಹಲವು ಪಾಕಿಸ್ತಾನಿ ಉಗ್ರ ಸಂಘಟನೆಗಳಿಗೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಪಾಕಿಸ್ತಾನ ಭಯೋತ್ಪಾದನೆ ಬಗ್ಗೆ ಸುಳ್ಳು ಹೇಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿರುವ ಎಫ್ಎಟಿಎಫ್ ವರದಿ, ನೆರೆ ರಾಷ್ಟ್ರ 117 ವ್ಯವಹಾರದ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ  22 ಲಕ್ಷಗಳನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದೆ. ಭಯೋತ್ಪಾದಕರು ಕಂಡುಕೊಳ್ಳುತ್ತಿರುವ  ಹೊಸ ಪಾವತಿ ವಿಧಾನಗಳು ಒಂದು ಉಗ್ರವಾದದ ವಿರುದ್ಧದ ಹೋರಾಟಕ್ಕೆ ಹೊಸ ಸವಾಲೊಡ್ಡುತ್ತಿದೆ ಎಂದೂ ಎಫ್ಎಟಿಎಫ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.