ದೇಶ

ಗುವಾಹಟಿ ಕೋರ್ಟ್ ಗೆ ಉಲ್ಫಾ ನಾಯಕ ಅನೂಪ್ ಚೆಟಿಯಾ ಹಾಜರ್

ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಪಾ ನಾಯಕ ಅನುಪ್ ಚೆಟಿಯಾನನ್ನು ಟ್ರಾನ್ಸಿಟ್ ರಿಮಾಂಡ್​ನಲ್ಲಿ ಸಿಬಿಐ ಗುವಾಹಟಿಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿದ್ದು....

ಗುವಾಹಟಿ ಕೋರ್ಟ್ ಗೆ ಉಲ್ಫಾ ನಾಯಕ ಅನೂಪ್ ಚೆಟಿಯಾ ಹಾಜರ್
ಅನುಪ್ ಚೆಟಿಯಾ
Published On :

ಗುವಾಹಟಿ: ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಪಾ ನಾಯಕ ಅನುಪ್ ಚೆಟಿಯಾನನ್ನು ಟ್ರಾನ್ಸಿಟ್ ರಿಮಾಂಡ್​ನಲ್ಲಿ ಸಿಬಿಐ ಗುವಾಹಟಿಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿದ್ದು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಬಾಂಗ್ಲಾದೇಶದಿಂದ ಹಸ್ತಾಂತರ ಗೊಂಡಿದ್ದ ಅನೂಪ್ ಛೆಟಿಯಾನನ್ನು  ಸಿಬಿಐ ವಶಕ್ಕೆ ಪಡೆದುಕೊಂಡಿತ್ತು. ಈಗ  ಚೆತಿಯಾ ಟ್ರಾನ್ಸಿಟ್ ರಿಮಾಂಡ್ ಮುಕ್ತಾಯವಾದ ಹಿನ್ನೆಲೆಯಲ್ಲಿ  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

1986ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು  ಸಿಬಿಐ ಆತನನ್ನು ತನ್ನ ಬಳಿ ಇಟ್ಟುಕೊಂಡಿದೆ. ಚೆತಿಯಾ ಈ ಕೊಲೆ ಪ್ರಕರಣದಲ್ಲಿ ಷಾಮೀಲಾಗಿದ್ದ ಎಂದು ಆಪಾದಿಸಲಾಗಿದೆ. ಇನ್ನೂ ಜಾಮೀನಿಗಾಗಿ ಮನವಿ ಸಲ್ಲಿಸಲಾಗಿದೆ ಎಂದು ಅನೂಪ್ ಛೆಟಿಯಾ ಪರ ವಕೀಲ ಬಿಜನ್ ಮಹಾಜವನ್ ತಿಳಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.