ದೇಶ

ನಮ್ಮ ನೂಡಲ್ಸ್ ಸುರಕ್ಷಿತ; ಅಪಪ್ರಚಾರ ಮಾಡಲಾಗುತ್ತಿದೆ: ಪತಂಜಲಿ

ಭಾರತೀಯ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಮಂಡಲಿ (ಎಫ್ ಎಸ್ ಎಸ್ ಎ ಐ) ನಿಂದ ಸುರಕ್ಷತಾ ಪ್ರಮಾಣಪತ್ರ ಪಡೆದಿಲ್ಲ ಎಂಬ ಆರೋಪ ಹೆದರಿಸುತ್ತಿರುವ ಯೋಗ ಬಾಬಾ ರಾಮ್ ದೇವ್

ನಮ್ಮ ನೂಡಲ್ಸ್ ಸುರಕ್ಷಿತ; ಅಪಪ್ರಚಾರ ಮಾಡಲಾಗುತ್ತಿದೆ: ಪತಂಜಲಿ
ಯೋಗ ಗುರು ಬಾಬಾ ರಾಮ್ ದೇವ್
Published On :

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಮಂಡಲಿ (ಎಫ್ ಎಸ್ ಎಸ್ ಎ ಐ) ನಿಂದ ಸುರಕ್ಷತಾ ಪ್ರಮಾಣಪತ್ರ ಪಡೆದಿಲ್ಲ ಎಂಬ ಆರೋಪ ಹೆದರಿಸುತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಅಟ್ಟ ನೂಡಲ್ಸ್ ಬಗ್ಗೆ ಪತಂಜಲಿ ಸಂಸ್ಥೆ ಪ್ರತಿಕ್ರಿಯಿಸಿದ್ದು, ನಾವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಮತ್ತು ಅದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದಿದ್ದು, ನಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ದೂರಿದೆ.

"ನಾವು ಎಫ್ ಎಸ್ ಎಸ್ ಎ ಐನ ಎಲ್ಲ ನಿಯಮಗಳನ್ನು ಪಾಲಿಸಿದ್ದೇವೆ, ಯಾವುದನ್ನೂ ಉಲ್ಲಂಘಿಸಿಲ್ಲ. ಪತಂಜಲಿ ಅಟ್ಟ ನೂಡಲ್ಸ್ ಬಗ್ಗೆ ಅಪಪ್ರಚಾರದ ಸುದ್ದಿಯನ್ನು ಇಂದು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ" ಎಂದು ವಕ್ತಾರ ಎಸ್ ಕೆ ತಿಜಾರ್ವಾಲಾ ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಮರುನಾಮಕರಣದ ನೊಂದಣಿಯ ಪ್ರತಿಗಳನ್ನು ಕೂಡ ಮಾಧ್ಯಮಗಳಿಗೆ ಒದಗಿಸಿದ್ದಾರೆ.

ಇದಕ್ಕೂ ಮುಂಚಿತವಾಗಿ ಲಭ್ಯವಿದ್ದ ವರದಿಗಳ ಪ್ರಕಾರ ಈ ಉತ್ಪನ್ನಕ್ಕೆ ಅಗತ್ಯವಿದ್ದ ಪರವಾನಗಿ ಪಡೆದಿಲ್ಲ ಎಂದು ಎಫ್ ಎಸ್ ಎಸ್ ಎ ಐ ದೂರಿತ್ತು ಎಂದು ತಿಳಿದುಬಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.