ದೇಶ

ಪಾಕ್‍ಗೆ ಪ್ರಧಾನಿ ಮೋದಿ ಟಾಂಗ್

ಕೆಲವು ದೇಶಗಳನ್ನೂ ಈಗಲೂ ಭಯೋತ್ಪಾದನೆಯನ್ನು ತನ್ನ ಸರ್ಕಾರಿ ನೀತಿಯನ್ನಾಗಿಸಿವೆ. ಇಡೀ ಜಗತ್ತೇ ಒಂದಾಗಿ ಎಲ್ಲ ರಾಜಕೀಯ...

ಪಾಕ್‍ಗೆ ಪ್ರಧಾನಿ ಮೋದಿ ಟಾಂಗ್
ಪ್ರಧಾನಿ ನರೇಂದ್ರ ಮೋದಿ
Published On :
ಟರ್ಕಿ:``ಕೆಲವು ದೇಶಗಳನ್ನೂ ಈಗಲೂ ಭಯೋತ್ಪಾದನೆಯನ್ನು ತನ್ನ ಸರ್ಕಾರಿ ನೀತಿಯನ್ನಾಗಿಸಿವೆ. ಇಡೀ ಜಗತ್ತೇ ಒಂದಾಗಿ ಎಲ್ಲ ರಾಜಕೀಯ ಪರಿಗಣನೆಯನ್ನು ಮರೆತು ಈ ತೀರ್ವ ಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಈ ರೀತಿಯಾಗಿ ಉಗ್ರವಾದದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವುದರ ಜೊತೆಗೆ ಪಾಕಿಸ್ತಾನಕ್ಕೂ ಸ್ಪಷ್ಟ ಸಂದೇಶ ರವಾನಿಸಿದ್ದು ಪ್ರಧಾನಿ ನರೇಂದ್ರ ಮೋದಿ. 
ಟರ್ಕಿಯ ಜಿ20 ಶೃಂಗದಲ್ಲಿ ಮಾತನಾಡಿದ ಪ್ರಧಾನಿ, ``ಉಗ್ರವಾದ ಪ್ರಮುಖ ಜಾಗತಿಕ ಸವಾಲು. ಸಂಘರ್ಷದ ಪ್ರದೇಶಗಳಿಂದ ಹಿಡಿದು ಮೂಲೆ ಮೂಲೆಯ ನಗರಗಳವರೆಗೆ ಭಯೋತ್ಪಾದಕರು ಅಟ್ಟಹಾಸಗೈಯ್ಯುತ್ತಿದ್ದಾರೆ. ಯಾರು ಉಗ್ರರನ್ನು ಬೆಂಬಲಿಸುತ್ತಾರೋ, ಪ್ರಾಯೋಜಕತ್ವ ನೀಡುತ್ತಾರೋ ಅವರನ್ನು ನಾವು ಪ್ರತ್ಯೇಕವಾಗಿಡಬೇಕಾದ ಅಗತ್ಯವಿದೆ.
ಮಾನವೀಯತೆಯ ಮೌಲ್ಯಗಳನ್ನು ಹಂಚುವವರೊಂದಿಗೆ ಕೈಜೋಡಿಸಬೇಕಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಕಾನೂನು ಚೌಕಟ್ಟನ್ನು ಪುನಾರಚಿಸಬೇಕು'' ಎಂದು ಒತ್ತಾಯಿಸಿದ್ದಾರೆ.
ಧಾರ್ಮಿಕ ನಾಯಕರು, ಚಿಂತಕರನ್ನು ಒಗ್ಗೂಡಿಸಿ ಭಯೋತ್ಪಾದನೆಯ ವಿರುದ್ಧ ಸಾಮಾಜಿಕ ಚಳವಳಿ ಆರಂಭಿಸಬೇಕು ಎಂದೂ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.