ಮಥುರಾ: ಭಾಯಿ ದೂಜ್ ಆಚರಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗಿ
‘ಭಾಯಿ ದೂಜ್‘ ಆಚರಣೆ ನಿಮಿತ್ತ ನವೆಂಬರ್ 13 ರಂದು ಮಥುರಾದ ಯಮುನಾ ನದಿ ದಂಡೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪವಿತ್ರ ಸ್ನಾನ ಮಾಡಿದ್ದಾರೆ.

ಮಥುರಾ: ‘ಭಾಯಿ ದೂಜ್‘ ಆಚರಣೆ ನಿಮಿತ್ತ ನವೆಂಬರ್ 13 ರಂದು ಮಥುರಾದ ಯಮುನಾ ನದಿ ದಂಡೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪವಿತ್ರ ಸ್ನಾನ ಮಾಡಿದ್ದಾರೆ.
ಭಾಯಿ ದೂಜ್ ಅಂಗವಾಗಿ ಸಹೋದರನಿಗೆ ಸಹೋದರಿಯಿಂದ ಪವಿತ್ರ ಸ್ನಾನದ ಪದ್ಧತಿ ಆಚರಣೆಯಲ್ಲಿದ್ದು ಸಾವಿರಾರು ಸಹೋದರ- ಸಹೋದರಿಯರು ಪವಿತ್ರ ಸ್ನಾನ ಮಾಡಿದ್ದಾರೆ. ಯಮುನಾ ನದಿ ಯಮನ ಸಹೋದರಿಯಾಗಿದ್ದು, ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಮೃತ್ಯು ದೇವತೆ(ಯಮ)ನನ್ನು ಒಲಿಸಿಕೊಳ್ಳಲು ಸಹೋದರ-ಸಹೋದರಿಯರು ಪವಿತ್ರ ಸ್ನಾನ ಮಾಡಬೇಕು ಎಂದು ಸ್ಥಳೀಯ ಧಾರ್ಮಿಕ ಮುಖಂಡ ಯಮುನಾ ದಾಸ್ ಹೇಳಿದ್ದಾರೆ.
ಮಥುರಾದಲ್ಲಿ ಮಾತ್ರ ಸಹೋದರ- ಸಹೋದರಿಯರಿಗೆ ದೇವಾಲಯವಿದ್ದು, ಭಾಯಿ ದೂಜ್ ಆಚರಣೆಗಾಗಿ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ದೇವಾಲಯದಲ್ಲಿ ವಿಶೇಶ ದೀಪಾಲಂಕರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದಿಂದ ಮತುರಾಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅನಿವಾಸಿ ಭಾರತೀಯರೂ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಮಥುರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದು, ವಿಶೇಷ ಧಾರ್ಮಿಕ ಆಚರಣೆ ಹಿನ್ನೆಲೆಯಲ್ಲಿ 56 ವಿಧದ ಆಹಾರ ಪದಾರ್ಥಗಳನ್ನು ತಯಾರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


