ದೇಶ

ನವೆಂಬರ್ ೧೪ರಂದು ಸರ್ಕಾರ ರಚನೆ ಕಾರ್ಯ ಪ್ರಾರಂಭ: ನಿತೀಶ್

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮುಂದಾಳತ್ವದ ಮಹಾ ಮೈತ್ರಿಗೆ ಭಾರಿ ಗೆಲುವು ಸಿಕ್ಕ ನಂತರ ನವೆಂಬರ್ ೧೪ ರಂದು ಸರ್ಕಾರ ರಚನೆಯ ಕಾರ್ಯ

ನವೆಂಬರ್ ೧೪ರಂದು ಸರ್ಕಾರ ರಚನೆ ಕಾರ್ಯ ಪ್ರಾರಂಭ: ನಿತೀಶ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Published On :

ಪಾಟ್ನಾ: ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಳತ್ವದ ಮಹಾ ಮೈತ್ರಿಗೆ ಭಾರಿ ಗೆಲುವು ಸಿಕ್ಕ ನಂತರ ನವೆಂಬರ್ ೧೪ ರಂದು ಸರ್ಕಾರ ರಚನೆಯ ಕಾರ್ಯ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಅಂದು ಸಂಪುಟ ಸಭೆ ಸೇರಿ ಈಗಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನವೆಂಬರ್ ೧೪ ರಂದು ಮಹಾ ಜಾತ್ಯಾತೀತ ಮೈತ್ರಿಯ ಶಾಸಕಾಂಗ ಸಭೆ ಸೇರಿ ಹೊಸ ನಾಯಕನನ್ನು ಆಯ್ಕೆ ಮಾಡಿ ಪ್ರಮಾಣ ವಚನದ ದಿನವನ್ನು ನಿಗದಿಪಡಿಸಲಾಗುವುದು ಎಂದು ರಾಜಭವನದಲ್ಲಿ ದೀಪಾವಳಿ ಪ್ರಯುಕ್ತ ರಾಜ್ಯಪಾಲ ರಾಮನಾಥ ಕೋವಿಂದ್ ಅವರಿಗೆ ಶುಭ ಕೋರಿದ ನಂತರ ತಿಳಿಸಿದ್ದಾರೆ.

ಶನಿವಾರದ ಶಾಸಕಾಂಗ ಸಭೆಯ ನಂತರ ಮಹಾ ಮೈತ್ರಿ ಅಧಿಕೃತವಾಗಿ ಸರ್ಕಾರ ರಚಿಸಲು ಮನವಿ ಮಾಡಲಾಗುವುದು ಎಂದು ನಿತೀಶ್ ತಿಳಿಸಿದ್ದಾರೆ. ಆರ್ ಜೆ ಡಿ ಪಕ್ಷದವರೊಬ್ಬರು ಉಪ ಮುಖ್ಯಮಂತ್ರಿಗಳಾಗುವರೇ ಎಂಬ ಪ್ರಶ್ನೆಗೆ "ಎಲ್ಲವನ್ನು ಸರಿಯಾದ ಸಮಯಕ್ಕೆ ತಿಳಿಸಲಾಗುವುದು, ಸಮಯಕ್ಕೆ ಮೊದಲೇ ಉದ್ವೇಗ ಏಕೆ?" ಎಂದು ಅವರು ಹೇಳಿದ್ದಾರೆ.

ಮಹಾ ಮತ್ರಿಯ ಪಕ್ಷಗಳಲ್ಲಿ ಲಾಲು ಪ್ರಸಾದ್ ಯಾದವ್ ಅವರ ಆರ್ ಜೆ ಡಿ ಪಕ್ಷ ೮೦ ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯು ೭೧ ಸ್ಥಾನಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ೨೭ ಸ್ಥಾನಗಳನ್ನು ಗಳಿಸಿದೆ.

ಗಾಂಧಿ ಮೈದಾನದಲ್ಲಿ ನವೆಂಬರ್ ೨೦ ರಂದು ನಿತೀಶ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.