ದೇಶ

ನೇಪಾಳದೊಂದಿಗಿನ ಉತ್ತಮ ಸಂಬಂಧ ಅಗತ್ಯವಿದೆ: ರಾಜನಾಥ್ ಸಿಂಗ್

ಭಾರತ ನೆರೆ ರಾಷ್ಟ್ರ ನೇಪಾಳದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿದ್ದು, ನೇಪಾಳದೊಂದಿಗಿನ ಉತ್ತಮ ಸಂಬಂಧಕ್ಕಾಗಿ ಭಾರತ ಎಲ್ಲವನ್ನು ಮಾಡಲು ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ...

ನೇಪಾಳದೊಂದಿಗಿನ ಉತ್ತಮ ಸಂಬಂಧ ಅಗತ್ಯವಿದೆ: ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಭಾರತ ನೆರೆ ರಾಷ್ಟ್ರ ನೇಪಾಳದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿದ್ದು, ನೇಪಾಳದೊಂದಿಗಿನ ಉತ್ತಮ ಸಂಬಂಧಕ್ಕಾಗಿ ಭಾರತ ಎಲ್ಲವನ್ನು ಮಾಡಲು ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

ನೇಪಾಳ ಹೊಸ ಸಂವಿಧಾನ ವಿರೋಧಿಸಿ ಮಾದೇಸಿ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನೇಪಾಳದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧವಿಲ್ಲ ಹಾಗೂ ಈ ಬಗ್ಗೆ ಯಾರನ್ನೂ ದೂಷಿಸುವುದಕ್ಕೂ ಇಷ್ಟ ಪಡುವುದಿಲ್ಲ. ಹಲವು ವರ್ಷಗಳಿಂದಲೂ ನೇಪಾಳ ಗ್ಯಾಸೋಲಿನ್ (ಪೆಟ್ರೋಲ್) ಆಮದಿಗೆ ಸಂಪೂರ್ಣವಾಗಿ ಭಾರತದ ಮೇಲೆ ಅವಲಂಬಿತವಾಗಿದೆ. ನೇಪಾಳದೊಂದಿಗೆ ಉತ್ತಮ ಸಂಬಂಧವನ್ನು ಭಾರತ ಬಯಸುತ್ತಿದೆ. ನಮ್ಮ ನೆರೆರಾಷ್ಟ್ರದೊಂದಿಗಿನ ಉತ್ತಮ ಸಂಬಂಧಕ್ಕಾಗಿ ನಾವು ಎಲ್ಲವನ್ನೂ ಮಾಡಲು ಸಿದ್ಧರಿದ್ದೇವೆಂದು ಎಂದು ಹೇಳಿದ್ದಾರೆ.

ನೇಪಾಳ ಹೊಸ ಸಂವಿಧಾನ ವಿರೋಧಿಸಿ ಮಾದೇಸಿ ಸಮುದಾಯದ ಜನರು ಭಾರತ-ನೇಪಾಳ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಹಲವೆಡೆ ವ್ಯಾಪಾರ ವಹಿವಾಟುಗಳಿಗೆ ತೀವ್ರ ಸಮಸ್ಯೆಯುಂಟಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.