ಬಿಜೆಪಿ ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಫಲಿತಾಂಶವೇ ಬೆರೆಯಾಗಿರುತ್ತಿತ್ತು: ಶತ್ರುಘ್ನ ಸಿನ್ಹಾ
ಪಕ್ಷ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು...

ನವದೆಹಲಿ: ಪಕ್ಷ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ಬಿಜೆಪಿ ಸಂಸದ ಬಾಲಿವುಡ್ ನಟ ಶತ್ರುಘ್ನ ಸಿನ್ನಾ ಅವರು ಸೋಮವಾರ ಹೇಳಿದ್ದಾರೆ.
'ನಾನು ಕೊಚ್ಚಿಕೊಳ್ಳುತ್ತಿಲ್ಲ. ಆದರೆ ಬಿಹಾರ ಜನತೆಯ ನಾಯಕ, ಈ ಮಣ್ಣಿನ ಮಗ ಹಾಗೂ ಬಿಹಾರಿ ಬಾಬುನನ್ನು ಈ ಚುನಾವಣೆಯಲ್ಲಿ ಕಡೆಗಣಿಸಲಾಯಿತು. ಇದು ನನ್ನ ಬೆಂಬಲಿಗರ ಹಾಗೂ ಅಭಿಮಾನಿಗಳ ಮೇಲೆ ಪರಿಣಾಮ ಬೀರಿತು ಅಂತ ನನಗೆ ಅನಿಸುತ್ತಿದೆ' ಎಂದಿದ್ದಾರೆ.
'ಒಂದು ವೇಳೆ ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಫಲಿತಾಂಶದಲ್ಲಿ ಎಷ್ಟು ವ್ಯತ್ಯಾಸ ಆಗುತ್ತಿತ್ತು ಅಂತ ಹೇಳಲಿಕ್ಕಾಗಲ್ಲ. ಆದರೆ ಒಂದಷ್ಟು ವ್ಯತ್ಯಾಸ ಅಂತು ಖಂಡಿತ ಆಗುತ್ತಿತ್ತು. ಈಗ ಬಂದಿರುವುದಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿ ಬರುತ್ತಿದ್ದವು' ಎಂದು ಬಾಲಿವುಡ್ ನಟ ಹೇಳಿರುವುದಾಗಿ ಸುದ್ದಿ ವಾಹನಿಯೊಂದು ವರದಿ ಮಾಡಿದೆ.
ಕೇಂದ್ರದಲ್ಲಿ ನಿಮ್ಮನ್ನು ಸಚಿವರನ್ನಾಗಿ ಮಾಡದಿರುವ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ಇವೆಲ್ಲಾ ಹಳೆ ಡೈಲಾಗಗಳು, ಇದನ್ನೇ ಹೇಳಿಕೊಂಡು ಕೆಲವರು ಹಲವು ಹುದ್ದೆಗಳನ್ನು ಪಡೆದುಕೊಂಡಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


