ನಿತೀಶ್‍ಗೆ ಸ್ನೇಹಹಸ್ತ ಚಾಚಿದ ದೇಶದ ಕಾರ್ಪೊರೇಟ್ ವಲಯ
ದೇಶದ ಕಾರ್ಪೊರೇಟ್ ಸಂಸ್ಥೆಗಳು ಬಿಹಾರದಲ್ಲಿ ನಿತೀಶ್ ಕುಮಾರ್ ಗೆಲುವನ್ನು ಸ್ವಾಗತಿಸಿವೆ. ಹೂಡಿಕೆಯಬಲವರ್ಧನೆ ಹಾಗೂ ಬೃಹತ್ಯೋಜನೆಗಳ...

Published On :
ನವದೆಹಲಿ : ದೇಶದ ಕಾರ್ಪೊರೇಟ್ ಸಂಸ್ಥೆಗಳು ಬಿಹಾರದಲ್ಲಿ ನಿತೀಶ್ ಕುಮಾರ್ ಗೆಲುವನ್ನು ಸ್ವಾಗತಿಸಿವೆ. ಹೂಡಿಕೆಯಬಲವರ್ಧನೆ ಹಾಗೂ ಬೃಹತ್ಯೋಜನೆಗಳ ಜಾರಿಗಾಗಿ ಹೊಸ ಸರ್ಕಾರದ ಜತೆ ನಿಕಟವಾಗಿ ದುಡಿ ಯುವುದಾಗಿ ಭರವಸೆ ನೀಡಿವೆ. ಗೆಲುವಿಗಾಗಿ ನಿತೀಶ್‍ರನ್ನು ಉದ್ಯಮ ಮಂಡಳಿ ಅಸೋಚಾಮ್ ಅಬಿsನಂದಿಸಿದ್ದು, ಕೃಷಿ, ಆಹಾರ ಸಂಸ್ಕರಣೆ, ಮೂಲಸೌಲಭ್ಯ, ನಿರ್ಮಾಣ, ಇ-ಆಡಳಿತ, ಪ್ರವಾಸೋ ದ್ಯಮ, ಆರೋಗ್ಯ, ಶಿಕ್ಷಣ, ಕೌಶಲ್ಯವೃದಿಟಛಿ, ಇಂಧನ, ವಿದ್ಯುತ್ ವಲಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಕೇಂದ್ರೀಕರಿಸುವುದಾಗಿ ಹೇಳಿದೆ. ಸಾಮಾನ್ಯ ಜನರಿಗೂ ತಲುಪುವತ್ತ ಆಡಳಿತವನ್ನು ಕೇಂದ್ರೀಕರಿಸಿರುವ ನಿತೀಶ್ ಆಡಳಿತ ಆರ್ಥಿಕತೆಯವೃದ್ಧಿಗೆ ನೆರವಾಗಲಿದೆ ಎಂಬ ಭರವಸೆಯನ್ನು ಯನ್ನು ಅಸೋಚಾಮ್ ಮಹಾಕಾರ್ಯ ದರ್ಶಿ ಡಿ.ಎಸ್.ರಾವತ್ ವ್ಯಕ್ತಪಡಿಸಿದ್ದಾರೆ. ಸಿಐಐ, ಬಯೋಕಾನ್, ಮಹೀಂದ್ರ, ಬಾಕ್ರ್ಲೆಸ್ ಸಂಸ್ಥೆಗಳೂನಿತೀಶ ರನ್ನು ಅಭಿನಂದಿಸಿವೆ.
ಮಾರುಕಟ್ಟೆಯತ್ತ ನಿಗಾ: ಎನ್‍ಡಿಎ ಸೋಲಿನಿಂದ ಮಾರುಕಟ್ಟೆಯಲ್ಲಿಉಂಟಾಗಬಹುದಾದ ತಳಮಳಗಳ ನ್ನು ತಹಬಂದಿಗೆ ತರಲು ಮಾರುಕಟ್ಟೆ ನಿಯಂತ್ರಣ ಮಂಡಳಿ ಸೆಬಿ ಹಾಗೂ
ಸ್ಟಾಕ್ ಎಕ್ಸ್‍ಚೇಂಜ್‍ಗಳು ವ್ಯವಸ್ಥೆ ಮಾಡಿಕೊಂಡಿವೆ. ವಹಿವಾಟಿನಲ್ಲಿ ವಂಚನೆ ಅಥವಾ ಆಪತ್ಕಾಲದ ನಿರ್ವಹಣೆಗೆ ವ್ಯವಸ್ಥೆ ಮಾಡಿಕೊಂಡಿ ರುವುದಾಗಿ ಸೆಬಿ ಹೇಳಿದೆ. ಸೋಮ ವಾರ ಆರಂಭವಾಗಲಿರುವ ಷೇರು ಮಾರುಕಟ್ಟೆಯಲ್ಲಿ ದಿಡೀರ್ ಏರು ಪೇರು ಅಥವಾ ಆಘಾತಕಾರಿ ಏರಿ ಳಿತ ಸಂಭವಿಸದಂತೆ ನಿಗಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


