ಶತೃಘ್ನ ಸಿನ್ಹಾ ಬಿಜೆಪಿ ವಿರೋಧಿ ಪ್ಯಾಕೇಜಿಂಗ್ ನ ಒಂದು ಭಾಗ: ಉಮಾಭಾರತಿ ಕಿಡಿ
ಶತೃಘ್ನ ಸಿನ್ಹಾ ಬಿಜೆಪಿ ವಿರೋಧಿ ಪ್ಯಾಕೇಜಿಂಗ್ ನ ಒಂದು ಭಾಗವಾಗಿದ್ದಾರೆ. ಹೀಗಾಗಿ ಪಕ್ಷದ ಹಿರಿಯ ನಾಯಕರು ಅವರ ವಿರುದ್ಧ ಅವಶ್ಯಕ ಕ್ರಮ ಜರುಗಿಸಲಿದ್ದಾರೆ ....

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಡೆಸಿದ ಪಿತೂರಿ, ಅಸಹಿಷ್ಟುತೆ ಚರ್ಚೆ ಹಾಗೂ ಗೋಮಾಂಸ ಪ್ರಕರಣಗಳು ಬಿಹಾರದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.
ಪ್ರಶಸ್ತಿ ವಾಪಸ್ ಯೋಜಿತ ಪಿತೂರಿಯಾಗಿತ್ತು. ಬಿಹಾರ ವಿಧಾನ ಸಭೆ ಚುನಾವಣೆ ವೇಳೆ ಉದ್ದೇಶಪೂರ್ವಕವಾಗಿಯೇ ಗೋಮಾಂಸ ವಿಷಯವನ್ನು ಅತಿ ಹೆಚ್ಚು ರಂಜಿಸಲಾಯಿತು ಎಂದು ಆರೋಪಿಸಿದ ಉಮಾ ಭಾರತಿ, ಅಸಹಿಷ್ಣುತೆ ವಿಚಾರ ಬಿಜೆಪಿ ಇಮೇಜಿಗೆ ಧಕ್ಕೆಯಾಗುವಂತೆ ಮಾಡಿತು ಎಂದು ಆಪಾದಿಸಿದ್ದಾರೆ.
ಇನ್ನು ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಪಕ್ಷದ ವಿರುದ್ಧ ನೀಡಿದ ಹೇಳಿಕೆಯಿಂದ ಬಿಹಾರದಲ್ಲಿ ಬಿಜೆಪಿಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ ಎಂದು ಆರೋಪಿಸಿದ್ದಾರೆ.
ಶತೃಘ್ನ ಸಿನ್ಹಾ ಬಿಜೆಪಿ ವಿರೋಧಿ ಪ್ಯಾಕೇಜಿಂಗ್ ನ ಒಂದು ಭಾಗವಾಗಿದ್ದಾರೆ. ಹೀಗಾಗಿ ಪಕ್ಷದ ಹಿರಿಯ ನಾಯಕರು ಅವರ ವಿರುದ್ಧ ಅವಶ್ಯಕ ಕ್ರಮ ಜರುಗಿಸಲಿದ್ದಾರೆ ಎಂದು ಉಮಾಭಾರತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


