ದೇಶ

ಬಿಹಾರ ಫಲಿತಾಂಶವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ: ಅಕ್ಲಾಖ್ ಪುತ್ರ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಗೆಲುವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ ಎಂದು ದಾದ್ರಿಯಲ್ಲಿ ಹತ್ಯೆಗೀಡಾದ...

ಬಿಹಾರ ಫಲಿತಾಂಶವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ: ಅಕ್ಲಾಖ್ ಪುತ್ರ
ಮಹಮ್ಮದ್ ಅಕ್ಲಾಖ್‌ನ ಪುತ್ರ ಸರ್‌ತಾಜ್
Published On :
ಬಿಸಾಡಾ (ದಾದ್ರಿ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಗೆಲುವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ ಎಂದು ದಾದ್ರಿಯಲ್ಲಿ ಹತ್ಯೆಗೀಡಾದ ಮಹಮ್ಮದ್ ಅಕ್ಲಾಖ್‌ನ ಪುತ್ರ ಸರ್‌ತಾಜ್ ಹೇಳಿದ್ದಾರೆ.
ಗೋಮಾಂಸ ಭಕ್ಷಣೆ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಉತ್ತರಪ್ರದೇಶದ ದಾದ್ರಿಯಲ್ಲಿ  ಅಕ್ಲಾಕ್ ನ್ನು ಮನೆಯಿಂದ ಹೊರಗೆಳೆದು ಕೆಲ ಜನರ ಗುಂಪು ಹೊಡೆದು ಸಾಯಿಸಿತ್ತು. ಆ ಮೇಲೆ ಈ ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಅಕ್ಲಾಕ್ ಮನೆಯಲ್ಲಿ ಗೋಮಾಂಸವಿರಲಿಲ್ಲ ಅಲ್ಲಿದ್ದದ್ದು ಮೇಕೆ ಮಾಂಸ ಎಂದು ತಿಳಿದು ಬಂದಿತ್ತು.
ವಾಯುಸೇನೆಯಲ್ಲಿ ಕಾರ್ಪರಲ್ ಆಫೀಸರ್ ಆಗಿದ್ದಾನೆ ಅಕ್ಲಾಕ್ ನ ಹಿರಿಯ ಮಗ ಸರ್‌ತಾಜ್.
ಹಗೆತನದ ರಾಜಕೀಯಕ್ಕೆ ದೇಶದಲ್ಲಿ ಸ್ಥಾನವಿಲ್ಲ ಎಂಬುದು ಗೊತ್ತಾಯ್ತು.  ಬಿಹಾರ ಚುನಾವಣಾ ಫಲಿತಾಂಶ ನನ್ನ ಅಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ. ಈ ಗೆಲವು ಜಾತಿ ವಿರೋಧಿ, ಧರ್ಮವಿರೋಧದ ವಿರುದ್ಧ ಸಿಕ್ಕ ಗೆಲುವು. ಧರ್ಮಗಳಲ್ಲಿ ದ್ವೇಷ ಹರಡಿ ಹೋರಾಟ ಮಾಡಿದುದರಲ್ಲಿ ಏನೂ ಪ್ರಯೋಜನವಿಲ್ಲ, ಜನರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರಕ್ಕೇರಿದ ನಂತರ ದೇಶವನ್ನು ವಿಭಜಿಸುವ ಕೆಲಸ ಮಾಡಬೇಡಿ, ಇದು ಎಲ್ಲ ರಾಜಕಾರಣಿಗಳಲ್ಲಿ ನಾನು ಮಾಡುವ ವಿನಂತಿ ಎಂದು ಸರ್‌ತಾಜ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.