ಜನರನ್ನು ಒಂದು ಸಲ ಮಾತ್ರ ಮೂರ್ಖರನ್ನಾಗಿ ಮಾಡಬಹುದು: ಬಿಜೆಪಿಗೆ ಶಿವಸೇನೆ
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ತನ್ನ ಮಿತ್ರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಿವ,ಸೇನೆ...

ಮುಂಬೈ: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ತನ್ನ ಮಿತ್ರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಿವ,ಸೇನೆ, 'ನೀವು ಜನರನ್ನು ಒಂದು ಸಲ ಮಾತ್ರ ಮೂರ್ಖರನ್ನಾಗಿ ಮಾಡಬಹುದು, ಪದೇ ಪದೆ ಮಾಡಲಿಕ್ಕಾಗಲ್ಲ' ಎಂದು ಕುಟುಕಿದೆ.
ಅಧಿಕಾರ ಮತ್ತು ಹಣ ಬಲದಿಂದ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದಿರುವ ಶಿವಸೇನೆ, ಬಿಹಾರ ಚುನಾವಣೆಯ ಪ್ರಚಾರದ ವೇಳೆ ರಾಜಕೀಯ ಶಕ್ತಿ ಮತ್ತು ಹಣಬಲದ ಅಪರಿಮಿತ ಬಳಕೆಯೊಂದಿಗೆ ಬಿಹಾರಕ್ಕೆ ಹಲವು ಕೋಟಿ ರುಪಾಯಿಗಳ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೂ ಬಿಜೆಪಿಗೆ 60 ಸ್ಥಾನಗಳನ್ನು ಕೂಡ ಗೆಲ್ಲಲಾಗಲಿಲ್ಲ ಮತ್ತು ಮಿತ್ರ ಪಕ್ಷಗಳು 20 ಅಡಿ ಆಳದಲ್ಲಿ ಸಮಾಧಿಯಾಗಿದ್ದಾರೆ' ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅದ್ಭುತ ಗೆಲುವಿಗೆ ಅವರ ಕ್ಲೀನ್ ಇಮೇಜ್ ಕಾರಣ, ಪ್ರಾಮಾಣಿಕ ಪ್ರಚಾರಾಭಿಯಾನ ಹಾಗೂ ಅಭಿವೃದ್ಧಿಗೆ ನೀಡಿದ ಒತ್ತು ಮತ್ತೊಂದು ಪ್ರಮುಖ ಕಾರಣ. ಅವರ ಅಭಿಯಾನದಲ್ಲಿ ದ್ವೇಷದ ಕೋಮು ರಾಜಕಾರಣಕ್ಕೆ ಯಾವುದೇ ಅವಕಾಶವಿರಲಿಲ್ಲ ಎಂದು ಶಿವಸೇನೆ ಹೇಳಿದೆ.
ಪ್ರಚಾರಾಭಿಯಾನದ ಉದ್ದಕ್ಕೂ ನಿತೀಶ್ ಕುಮಾರ್ ಅವರು ತಮ್ಮ ಮತದಾರರಲ್ಲಿ ಯಾವ ಸುಳ್ಳನ್ನೂ ಹೇಳಲಿಲ್ಲ, ಢೋಂಗಿ ಭರವಸೆಗಳನ್ನು ನೀಡಲಿಲ್ಲ. ಹಣಶಕ್ತಿ, ಅಧಿಕಾರದ ಶಕ್ತಿಯನ್ನು ತೋರ್ಪಡಿಸಲಿಲ್ಲ. ಕಾನೂನಿನ ಆಡಳಿವೇ ಪರಮೋಚ್ಚವೆಂದು ಪ್ರತಿಪಾದಿಸುತ್ತಾ ಬಂದರು. ಪ್ರಚಾರಾಭಿಯಾನದ್ದುದ್ದಕ್ಕೂ ಅವರು ತಮ್ಮನ್ನು ಜನರಿಗೆ ಸರಳವಾಗಿಯೇ ಕಾಣಿಸಿದರು ಎಂದು ಸೇನೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


