ಬಿಹಾರ ಚುನಾವಣೆ: ಎನ್‌ಡಿಎಗೆ ಬಹುಮತ?
ಎನ್‌ಡಿಟಿವಿ ನಡೆಸಿದ ಬಿಹಾರ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಪರ ಬಹುಮತದ ಫಲಿತಾಂಶ ವ್ಯಕ್ತವಾಗಿದೆ. ೨೪೩ ಸ್ಥಾನಗಳಲ್ಲಿ ೧೨೫ ಸ್ಥಾನಗಳು ಬಿಜೆಪಿ ಪಾಲಾಗಲಿವೆಯೆಂದು ಎನ್‌ಡಿಟಿವಿ ತಿಳಿಸಿದೆ...

ನವದೆಹಲಿ: ಎನ್‌ಡಿಟಿವಿ ನಡೆಸಿದ ಬಿಹಾರ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಪರ ಬಹುಮತದ ಫಲಿತಾಂಶ ವ್ಯಕ್ತವಾಗಿದೆ. ೨೪೩ ಸ್ಥಾನಗಳಲ್ಲಿ ೧೨೫ ಸ್ಥಾನಗಳು ಬಿಜೆಪಿ ಪಾಲಾಗಲಿವೆಯೆಂದು ಎನ್‌ಡಿಟಿವಿ ತಿಳಿಸಿದೆ.
ಉಳಿದ ೧೧೦ ಸ್ಥಾನಗಳು ಜಾತ್ಯತೀತ ಮೈತ್ರಿ ಕೂಟದ ಪಾಲಾಗಲಿವೆ. ಈ ಸಮೀಕ್ಷೆಗಾಗಿ ೭೬,೦೦೦ ಮಂದಿಯನ್ನು ಮಾತಾಡಿಸಲಾಗಿದೆ. ಮೊದಲ ಹಂತದ ಮತದಾನ ನಡೆದ ೪೯ ಸ್ಥಾನ ಗಳಲ್ಲಿ ೨೮ ಸ್ಥಾನಗಳನ್ನು ಮೈತ್ರಿಕೂಟ, ೨೦ ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ. ಎರಡನೇ ಹಂತದ ೩೨ ಸ್ಥಾನಗಳಲ್ಲಿ ಮೈತ್ರಿಕೂಟ ೧೨ ಹಾಗೂ ಬಿಜೆಪಿ ೧೯ ಸ್ಥಾನ ಗಳಿಸಲಿವೆ. ಮೂರನೇ ಹಂತದ ೫೦ರಲ್ಲಿ ಬಿಜೆಪಿ ೨೮ನ್ನೂ ಮೈತ್ರಿಕೂಟ ೨೧ನ್ನೂ ಪಡೆಯಲಿವೆ. ನಾಲ್ಕನೇ ಹಂತದ ೫೫ರಲ್ಲಿ ಮೈತ್ರಿಕೂಟ ೨೧ನ್ನೂ ಬಿಜೆಪಿ ೩೧ನ್ನೂ ಗಳಿಸಲಿವೆ. ಐದನೇ ಹಂತದಲ್ಲಿ ೨೮ನ್ನು ಮೈತ್ರಿಕೂಟ ಮತ್ತು ೨೭ನ್ನು ಬಿಜೆಪಿ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
ಗುರುವಾರ ನಡೆಸಲಾದ ಸಿಎನ್ ಎಕ್ಸ್ ಸಮೀಕ್ಷೆಯಲ್ಲಿ ಬಿಜೆಪಿ ೯೩, ಮೈತ್ರಿಕೂಟ ೧೩೨, ಎಸಿ ನೀಲ್ಸನ್ ಸಂಸ್ಥೆ ಬಿಜೆಪಿ ೧೦೮, ಮೈತ್ರಿಕೂಟ ೧೩೦ ಸ್ಥಾನ ಪಡೆದಿದ್ದವು. ಚಾಣಕ್ಯ ಒಂದೇ ಬಿಜೆಪಿ ೧೫೫ ಸ್ಥಾನ ಪಡೆಯಲಿದೆ ಎಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


