ಬಹುಪತ್ನಿತ್ವ ಹಾಗೂ ಸ್ವಾರ್ಥಕ್ಕಾಗಿ ಮುಸ್ಲಿಂ ಪುರುಷರಿಂದ ಕುರಾನ್ ದುರ್ಬಳಕೆ : ಹೈಕೋರ್ಟ್ ಕಿಡಿ
ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವುದಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಮುಸಲ್ಮಾನ ಪುರುಷರು ಕುರಾನ್ ಪವಿತ್ರ ಗ್ರಂಥವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ...

ಅಹಮದಾಬಾದ್: ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವುದಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಮುಸಲ್ಮಾನ ಪುರುಷರು ಕುರಾನ್ ಪವಿತ್ರ ಗ್ರಂಥವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಕಿಡಿ ಕಾರಿದೆ.
ದೇಶವು ಸಮಾನ ನಾಗರಿಕ ಸಂಹಿತೆಯನ್ನು ಹೊಂದುವುದಕ್ಕೆ ಈಗ ಕಾಲ ಕೂಡಿ ಬರುತ್ತಿದೆ ಎಂದು ಹೇಳಿರುವ ಹೈಕೋರ್ಟ್ ದೇಶದ ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘನೆ ಮಾಡುವುದಕ್ಕೆ ಕಡಿವಾಣ ಹಾಕಲು ಸೂಚಿಸಿದೆ. ಆದಷ್ಟು ಶೀಘ್ರವೇ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಒಂದಕ್ಕಿಂತ ಹೆಚ್ಚು ಪತ್ನಿಯನ್ನು ಹೊಂದುವ ಅಪರಾಧವನ್ನು ಶಿಕ್ಷಿಸುವ ಐಪಿಸಿಯ 494ನೇ ಸೆಕ್ಷನ್‌ಗೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸುವ ಸಂದರ್ಭದಲ್ಲಿ ಜಸ್ಟಿಸ್ ಜೆ ಬಿ ಪರ್ದಿವಾಲಾ ತಿಳಿಸಿದ್ದಾರೆ.
ತನ್ನ ಅನುಮತಿ ಇಲ್ಲದೆ ಪತಿ ಇನ್ನೊಬ್ಬಾಕೆಯನ್ನು ವಿವಾಹವಾಗಿರುವುದಾಗಿ ಆರೋಪಿಸಿ ಪತ್ನಿಯು ದಾಖಲಿಸಿದ ಎಫ್ ಐ ಆರ್ ಅನ್ನು ವಜಾಗೊಳಿಸುವಂತೆ ಕೋರಿ ಜಾಫರ್ ಅಬ್ಟಾಸ್ ಮರ್ಚಂಟ್ ಗುಜರಾತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮುಸ್ಲಿಂ ಪುರುಷರು ನಾಲ್ಕು ಬಾರಿ ಮದುವೆಯಾಗುವ ಅವಕಾಶವಿದೆ; ಹಾಗಾಗಿ ತನ್ನ ವಿರುದ್ಧ ತನ್ನ ಪತ್ನಿಯು ದಾಖಲಿಸಿರುವ ಎಫ್ ಐ ಆರ್ ಗೆ ಕಾನೂನು ಸಿಂಧುತ್ವ ಇರುವುದಿಲ್ಲ; ಅಂತೆಯೇ ಅದನ್ನು ವಜಾ ಮಾಡಬೇಕು ಎಂದು ಜಾಫರ್ ಅವರು ಕೋರಿದ್ದರು.
"ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದುವ ಸಲುವಾಗಿ ಕುರಾನ್ ಅನ್ನು ತಪ್ಪಾಗಿ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ವಾರ್ಥಪರತೆಯಿಂದ ಅರ್ಥೈಸಿಕೊಳ್ಳುತ್ತಿದ್ದಾರೆ' ಎಂದು ಹೇಳಿದರು.ಮುಸ್ಲಿಂ ವೈಯಕ್ತಿಕ ಕಾನೂನು ಪತ್ನಿಯನ್ನು ಕ್ರೂರವಾಗಿ ನಡೆಸಿಕೊಳ್ಳುವುದಕ್ಕೆ, ಪತಿಯ ಮನೆಯಿಂದ ಆಕೆಯನ್ನು ಹೊರಗೆ ಹಾಕುವುದಕ್ಕೆ ಮತ್ತು ಅನಂತರ ಎರಡನೇ ಮದುವೆಯಾಗುವುದಕ್ಕೆ ಮುಸ್ಲಿಂ ಪುರುಷರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


