ದೇಶ

ಅಸಹಿಷ್ಣುತೆ ವಿರುದ್ಧ ಪ್ರತಿಭಟನೆಗೆ ಮಾಜಿ ಸೈನಿಕರ ಸಾಥ್; ಪದಕ ಹಿಂದಿರುಗಿಸುವುದಾಗಿ ಬೆದರಿಕೆ

ದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಅಸಹಿಷ್ಣುತೆ ವಿರೋಧಿಸಿ ಸಾಹಿತಿಗಳು, ಚಿತ್ರಿ ನಿರ್ಮಾಪಕರು ತಮ್ಮ ರಾಷ್ಟ್ರ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ...

ಅಸಹಿಷ್ಣುತೆ ವಿರುದ್ಧ ಪ್ರತಿಭಟನೆಗೆ ಮಾಜಿ ಸೈನಿಕರ ಸಾಥ್; ಪದಕ ಹಿಂದಿರುಗಿಸುವುದಾಗಿ ಬೆದರಿಕೆ
ಸತ್ಬಿರ್ ಸಿಂಗ್
Published On :

ನವದೆಹಲಿ: ದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಅಸಹಿಷ್ಣುತೆ ವಿರೋಧಿಸಿ ಸಾಹಿತಿಗಳು, ಚಿತ್ರಿ ನಿರ್ಮಾಪಕರು ತಮ್ಮ ರಾಷ್ಟ್ರ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಪ್ರತಿಭಟನೆಗೆ ಇದೀಗ ಮಾಜಿ ಸೈನಿಕರು ಸಾಥ್ ನೀಡಿದ್ದು, ತಮ್ಮ ಪದಕಗಳನ್ನು ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಅಸಹಿಷ್ಣುತೆ ವಿರೋಧಿಸಿ ದೇಶಾದ್ಯಂತ ಮಾಜಿ ಸೈನಿಕರು ತಮ್ಮ ಪದಕಗಳನ್ನು ಜಿಲ್ಲಾಧಿಕಾರಿಗಳಿಗೆ ವಾಪಸ್ ನೀಡಲಿದ್ದಾರೆ ಎಂದು ನಿವೃತ್ತ ಮೇಜರ್ ಜನರಲ್ ಸತ್ಬಿರ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.

'ನಾವು ನಮ್ಮ ಪದಕಗಳನ್ನು ಹಿಂದಿರುಗಿಸುತ್ತೇವೆ ಮತ್ತು ಕಪ್ಪು ದೀಪಾವಳಿ ಆಚರಿಸುವ ಮೂಲಕ ಪ್ರತಿಭಟಿಸುವುದಾಗಿ' ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ನಿನ್ನೆಯಷ್ಟೇ ಸಾಹಿತಿ ಅರುಂಧತಿ ರಾಯ್ ಹಾಗೂ ಇತರೆ 23 ರಾಷ್ಟ್ರ ಪ್ರಶಸ್ತಿ ವಿಜೇತರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.