ಮುಂಬೈನಲ್ಲಿ ಛೋಟಾ ರಾಜನ್ ಆಪ್ತ ನೀಲೇಶ್ ದಿನಕರ್ ಬಂಧನ
ಭೂಗತ ಪಾತಕಿ ಛೋಟಾ ರಾಜನ್ ನ ಬಲಗೈ ಬಂಟ ನೀಲೇಶ್ ದಿನಕರ್ ಪರಾಡ್ಕರ್ ಅಲಿಯಾಸ್ ಶಟ್ಲ್ಯಾ...

Published On :
ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ನ ಬಲಗೈ ಬಂಟ ನೀಲೇಶ್ ದಿನಕರ್ ಪರಾಡ್ಕರ್ ಅಲಿಯಾಸ್ ಶಟ್ಲ್ಯಾ ಎಂಬುವವನನ್ನು ಮುಂಬೈ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಹಫ್ತಾ ವಸೂಲಿ ಆರೋಪದ ಮೇಲೆ ಮುಂಬೈ ಪೊಲೀಸರು ನಿನ್ನ ಬಂಧಿಸಿದ್ದಾರೆ. ಪರಾಡ್ಕರ್ ಮತ್ತು ಮತ್ತೊಬ್ಬ ಪಾತಕಿ ರಘು ಶೆಟ್ಟಿ ಎಂಬುವರು ಜೊತೆಗೂಡಿ ಭಂಡೂಪ್ ಮೂಲದ ಕೊಳೆಗೇರಿ ಅಭಿವೃದ್ಧಿ ಪ್ರಾಧಿಕಾರದ ಡೆವಲಪರ್ ವೊಬ್ಬರಿಂದ ರು.15 ಕೋಟಿ ಹಫ್ತಾಕ್ಕೆ ಬೇಡಿಕೆಯಿಟ್ಟಿದ್ದರು.
ಛೋಟಾ ರಾಜನ್ ನ ಆದೇಶದ ಮೇರೆಗೆ ಸೆಪ್ಟೆಂಬರ್ 5ರಂದು ಹಫ್ತಾಗೆ ಬೇಡಿಕೆಯಿಟ್ಟಿದ್ದರು. ವಡಾಲದಲ್ಲಿ ಉದ್ದೇಶಿತ ಎಶ್ ಆರ್ ಎ ಯೋಜನೆಗಾಗಿ ಡೆವಲಪರ್ ನಿಂದ ರು.15 ಕೋಟಿ ಹಫ್ತಾ ಕೇಳಲಾಗಿತ್ತು. ಈ ಆರೋಪದ ಮೇರೆಗೆ ಪರಾಡ್ಕರ್ ನನ್ನು ಬಂಧಿಸಲಾಗಿದೆ ಎಂದು ಮುಂಬೈನ ಜಂಟಿ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಹೇಳಿದ್ದಾರೆ.
ನೀಲೇಶ್ ದಿನಕರ್ ವಿರುದ್ಧ ಐಪಿಸಿ 452, 387 (ಹಣ ವಸೂಲಿ ಮಾಡುವ ಉದ್ದೇಶದಿಂದ ಜೀವ ಬೆದರಿಕೆ ಹಾಕುವುದು) ಹಾಗೂ 34ರ (ಒಂದೇ ಉದ್ದೇಶದಿಂದ ಹಲವು ವ್ಯಕ್ತಿಗಳಿಂದ ಕಿರುಕುಳ) ಅಡಿ ಪ್ರಕರಣ ದಾಖಲಾಗಿದೆ. ಇವರ ಮೇಲೆ ಅನೇಕ ಹಫ್ತ ವಸೂಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಗೆ ಬೇಕಾಗಿದ್ದವರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Mumbaiಮುಂಬೈಭೂಗತ ಪಾತಕಿಆಪ್ತgangsterclose aideChhota Rajanಛೋಟಾ ರಾಜನ್Nilesh Dinkar Paradkarನೀಲೇಶ್ ದಿನಕರ್ ಪರಾಡ್ಕರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


