ಕೇಂದ್ರ ಸರ್ಕಾರವೂ ಚರ್ಚೆಗೆ ಸಿದ್ಧ: ರಾಜನಾಥ್ ಸಿಂಗ್
ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರಶಸ್ತಿ ವಾಪ್ಸಿ ಬಗ್ಗೆ ಸಾಹಿತಿಗಳು,ಚಿಂತಕರ ಜತೆ ಚರ್ಚೆ ನಡೆಸಲು ಮುಂದಾಗಿರುವಂತೆಯೇ...

ನವದೆಹಲಿ: ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರಶಸ್ತಿ ವಾಪ್ಸಿ ಬಗ್ಗೆ ಸಾಹಿತಿಗಳು, ಚಿಂತಕರ ಜತೆ ಚರ್ಚೆ ನಡೆಸಲು ಮುಂದಾಗಿರುವಂತೆಯೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಅದೇ ಮಾತುಗಳನ್ನಾಡಿದ್ದಾರೆ. `ದ ಇಕನಾಮಿಕ್ ಟೈಮ್ಸ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ವಾದವನ್ನು ರಾಜನಾಥ್ ತಿರಸ್ಕರಿಸಿದ್ದಾರೆ. ದೇಶದಲ್ಲಿ ಆಂತರಿಕ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರನ್ನು ದೂಷಿಸಬೇಕಾದ ಅಗತ್ಯವಿಲ್ಲ. ದೇಶದ ಗೃಹ ಸಚಿವ ತಾವು. ಈ ಬಗ್ಗೆ ಆಕ್ಷೇಪಿಸುವವರು ತಮ್ಮನ್ನೇ ಕೇಳಲಿ ಎಂದಿದ್ದಾರೆ ರಾಜನಾಥ್ ಸಿಂಗ್.
``ಸಾಹಿತಿಗಳ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದಕ್ಕೆ ಅವರು ಸಿದ್ಧರಾಗಿ ಬರಲಿ. ಎಲ್ಲ ವಿಚಾರಗಳ ಬಗ್ಗೆಯೂ ಚರ್ಚಿಸಲು ಸಿದ್ಧನಿದ್ದೇನೆ.ಯಾವ ಕಾರಣಗಳಿಗಾಗಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಬಗ್ಗೆ ಕಾರಣಗಳನ್ನು ಸಾಹಿತಿಗಳು ವಿವರಿಸಲಿ. ಅದನ್ನು ಬಗೆಹರಿಸಲು ಸಿದ್ಧನಿದ್ದೇನೆ'' ಎಂದು ಹೇಳಿದ್ದಾರೆ.
ಪ್ರಶಸ್ತಿ ಹಿಂತಿರುಗಿಸಲು ಸಾಹಿತಿಗಳು ದಾದ್ರಿ ಘಟನೆ ಮತ್ತು ವಿಚಾರವಾದಿಗಳ ಮೇಲೆ ಹಲ್ಲೆ ಮತ್ತು ಹತ್ಯೆ ಘಟನೆಗಳನ್ನು ಮುಂದಿಟ್ಟಿದ್ದಾರೆ. ಅಸ್ಸಾಂ, ಗುಜರಾತ್‍ಗಳಲ್ಲಿ ಬೇರೆ ಪಕ್ಷದ ಸರ್ಕಾರ ಗಳು ಇದ್ದಾಗಲೂ ಕೂಡ ಗಲಭೆಗಳು ಸಂಭವಿಸಿವೆ. ಆಗ ಯಾರು ಕೂಡ ಪ್ರಶಸ್ತಿ ಹಿಂದಿರುಗಿಸುವ ಮಾತುಗಳನ್ನಾಡಲಿಲ್ಲ. ಅವರಿಗೆ ಸಮಾಧಾನ ಆಗದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬಗ್ಗೆ ಚರ್ಚಿಸುವ ಅವಕಾಶವಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


