ಉತ್ತರ ಪ್ರದೇಶದಲ್ಲಿದ್ದಾನಂತೆ ನರ್ಸ್ ಅರುಣಾ ಶಾನ್ ಬಾಗ್ ಅತ್ಯಾಚಾರ ಆರೋಪಿ
42 ವರ್ಷಗಳ ಸುದೀರ್ಘ ಕಾಲದ ಕೋಮಾದಲ್ಲಿದ್ದು ಇತ್ತೀಚೆಗೆ ನಿಧನರಾದ ನರ್ಸ್ ಅರುಣಾ ಶಾನ್ ಬಾಗ್ ಅತ್ಯಾಚಾರ ಆರೋಪಿ.....

ಮುಂಬಯಿ: 42 ವರ್ಷಗಳ ಸುದೀರ್ಘ ಕಾಲದ ಕೋಮಾದಲ್ಲಿದ್ದು ಇತ್ತೀಚೆಗೆ ನಿಧನರಾದ ನರ್ಸ್ ಅರುಣಾ ಶಾನ್ ಬಾಗ್ ಅತ್ಯಾಚಾರ ಆರೋಪಿ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಇದ್ದಾನೆಂದು ಪತ್ರಿಕೆಯೊಂದು ವರದಿ ಮಾಡಿದೆ.
ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿದ್ದ ಸೋನಲಾಲ್ ಭಾರ್ತಾ ವಲ್ಮೀಕಿ ಉತ್ತರ ಪ್ರದೇಶದ ಗಾಜಿಯಾಬಾದ್ ನ ಪಾರ್ಪಾ ಗ್ರಾಮವೊಂದರಲ್ಲಿ ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಹಿಂದಿನ ಯಾವ ಘಟನೆಗಳು ನೆನಪಿಲ್ಲವಂತೆ. ಹೀಗಾಗಿ ಆತನ ವಿರುದ್ಧ ಯಾವ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ಕಾನೂನು ಸಲಹೆಗಾರರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಂಬಯಿ ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 27 1973 ರಂದು ಮುಂಬಯಿನ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿದ್ದ ಸೋನಾಲಾಲ್ ಭಾರ್ತಾ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಅರುಣಾ ಶಾನ್ ಭಾಗ್ ಮೇಲೆ ಅತ್ಯಾಚಾರ ನಡೆಸಿ ನಾಯಿ ಕಟ್ಟುವ ಬೆಲ್ಟ್ ನಿಂದ ಕುತ್ತಿಗಿಗೆ ಬಿಗಿದಿದ್ದ. ಇನ್ನು ಅತ್ಯಾಚಾರ ಆರೋಪದಲ್ಲಿ ಜೈಲಿನಲ್ಲಿದ್ದ ಸೋನಾಲಾಲ್ 1980 ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


