ದೇಶ

ಐರ್ಲೆಂಡ್‍ನಲ್ಲಿ ಕ್ರಾಂತಿ, ಸಲಿಂಗಿ ಮದುವೆಗೆ ಕಾನೂನು ಮಾನ್ಯತೆ

ಸಂಪ್ರದಾಯಬದ್ದ ಕ್ಯಾಥೋಲಿಕ್ ದೇಶವಾದ ಐರ್ಲೆಂಡ್ ನಲ್ಲಿ ಸಾಮಾಜಿಕ ಕ್ರಾಂತಿಯಾಗಿದೆ.

ಐರ್ಲೆಂಡ್‍ನಲ್ಲಿ ಕ್ರಾಂತಿ, ಸಲಿಂಗಿ ಮದುವೆಗೆ ಕಾನೂನು ಮಾನ್ಯತೆ
ಸಲಿಂಗಿ ವಿವಾಹ ಬೆಂಬಲಿತರು
Published On :

ನವದೆಹಲಿ: ಸಂಪ್ರದಾಯಬದ್ದ ಕ್ಯಾಥೋಲಿಕ್ ದೇಶವಾದ ಐರ್ಲೆಂಡ್ ನಲ್ಲಿ ಸಾಮಾಜಿಕ ಕ್ರಾಂತಿಯಾಗಿದೆ.

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ನೀಡಬೇಕೆನ್ನುವ ಹೋರಾಟಕ್ಕೆ ಶನಿವಾರ ನಡೆದ ಜನ ಮತಗಣನೆಯಲ್ಲಿ ಜಯ ಸಿಕ್ಕಿದೆ. ಸದ್ಯ ಮತದಾನದ ಸಂಪೂರ್ಣ ಬಹಿರಂಗವಾಗಿಲ್ಲವಾದರೂ 43ರಲ್ಲಿ 40 ಕ್ಷೇತ್ರಗಳ ಜನ ಸಲಿಂಗಿ ಗಳ ಮದುವೆಯನ್ನು ಕಾನೂನುಬದ್ಧಗೊಳಿಸುವ ಪರ ಮತ ಹಾಕಿ ದ್ದಾರೆ.

ಈ ಮೂಲಕ ಜನಮತಗಣನೆ ಮೂಲಕ ಸಲಿಂಗಿಗಳ ಮದುವೆಗೆ ಅವಕಾಶ ಮಾಡಿಕೊಟ್ಟ ಮೊದಲ ದೇಶ ಐರ್ಲೆಂಡ್ ಆಗಿದೆ. ಸಂಪ್ರದಾಯಬದ್ಧ ಐರ್ಲೆಂಡ್‍ನಲ್ಲಿ ಗರ್ಭಪಾತಕ್ಕೇ ಅವಕಾಶ ಇರಲಿಲ್ಲ. ಆದರ ಸವಿತಾ ಹಾಲಪ್ಪನವರ್ ಸಾವಿನ ಬಳಿಕ ಆ ಕಾನೂನಿಗೂ ತಿದ್ದುಪಡಿ ತರಲಾಗಿತ್ತು. ಇದರಿಂದ ತಾಯಿಗೆ ಅನಿವಾರ್ಯ ಸಂದರ್ಭದಲ್ಲಿ ಗರ್ಭಪಾತಕ್ಕೆ ಕಾನೂನಲ್ಲಿ ಅವಕಾಶ ಸಿಕ್ಕಿತ್ತು. ಇದರ ಬೆನ್ನಲ್ಲೇ ಸಲಿಂಗಿಗಳ ಮದುವೆಗೂ ಕಾನೂನು ಮಾನ್ಯತೆ ನೀಡಬೇಕು ಎನ್ನುವ ಹೋರಾಟ ತೀವ್ರಗೊಂಡಿತ್ತು.

ಈ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳು, ಸೆಲೆಬ್ರಿಟಿಗಳ ಬೆಂಬಲವೂ ದೊರಕಿತ್ತು. ಹೀಗಾಗಿ ಮತದಾನದ ಬಳಿಕ ಬಹುತೇಕ ಸಲಿಂಗಿ ಜೋಡಿಗಳು ರಸ್ತೆಯಲ್ಲೇ ಪರಸ್ಪರ ಚುಂಬಿಸುವ ಮೂಲಕ ಈಗಾಗಲೇ ಸಂಭ್ರಮ ಆಚರಿಸಿಕೊಂಡಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಜನಮತ ಸಲಿಂಗಿ ಮದುವೆ ಪರವಾಗಿ ಬಂದರೆ ಸರ್ಕಾರ ಕಾನೂನು ತಿದ್ದುಪಡಿಗೆ ಮುಂದಾಗುವುದು ಅನಿವಾರ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.