ದೇಶ

11 ವರ್ಷದ ಭಾರತೀಯ ಮೂಲದ ಬಾಲಕನಿಗೆ ಅಮೆರಿಕನ್ ಪದವಿ!

ಕಿರಿಯ ವಯಸ್ಸು ಅಂದರೆ 11 ವರ್ಷಕ್ಕೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕ ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದಿದ್ದಾನೆ.

11 ವರ್ಷದ ಭಾರತೀಯ ಮೂಲದ ಬಾಲಕನಿಗೆ ಅಮೆರಿಕನ್ ಪದವಿ!
ಬಾಲಕ ತಾನಿಷ್ಕ್‌ ಅಬ್ರಹಾಂ
Published On :

ಲಾಸ್‌ ಎಂಜಲೀಸ್: ಕಿರಿಯ ವಯಸ್ಸು ಅಂದರೆ 11 ವರ್ಷಕ್ಕೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕ ಅಮೆರಿಕದ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದಿದ್ದಾನೆ.

ಕ್ಯಾಲಿಫೋರ್ನಿಯಾದ ಅಮೆರಿಕನ್‌ ರಿವರ್‌ ಕಾಲೇಜಿನಲ್ಲಿ ತಾನಿಷ್ಕ್ ಅಬ್ರಹಾಂ ವ್ಯಾಸಂಗ ಮಾಡುತ್ತಿದ್ದು, ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 1800 ವಿದ್ಯಾರ್ಥಿಗಳಿಗೆ ಡಿಗ್ರಿ ನೀಡಲಾಗಿದೆ. ಇವರ ಪೈಕಿ ತಾನಿಷ್ಕ್‌ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಓದಿನಲ್ಲಿ ಸದಾ ಮುಂದಿರುವ ಅಬ್ರಹಾಂ ಗಣಿತ, ವಿಜ್ಞಾನ ಮತ್ತು ವಿದೇಶಿ ಭಾಷೆಗಳ ಅಧ್ಯಯನ ವಿಷಯದಲ್ಲಿ ಪದವಿ ಪಡೆದಿದ್ದಾನೆ. ಅಮೆರಿಕನ್‌ ರಿವರ್‌ ಕಾಲೇಜಿನ ಇತಿಹಾಸದಲ್ಲೇ ಅಬ್ರಹಾಂ ಅತಿ ಕಿರಿಯ ವಯಸ್ಸಿಗೆ ಪದವಿ ಪಡೆದಿರುವ ಕೀರ್ತಿಗೆ ಪಾತ್ರರಾಗಿದ್ದಾನೆ. ಅಬ್ರಹಾಂ ಅವರ ಸಾಧನೆಗೆ  ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈದ್ಯ ಅಥವಾ ವೈದ್ಯಕೀಯ ಸಂಶೋಧಕನಾಗುವ ಗುರಿಯನ್ನು ಹೊಂದಿರುವ ಅಬ್ರಹಾಂ ಅಮೆರಿಕದ ಅಧ್ಯಕ್ಷನಾಗುವ ಕನಸು ಕಟ್ಟಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.