ಗೋಮಾಂಸ ತಿನ್ನದೇ ಬದುಕುವುದಿಲ್ಲ ಎಂದಾದರೆ ಪಾಕ್ ಗೆ ತೆರಳಿ: ನಖ್ವಿ
ಗೋಮಾಂಸ ತಿನ್ನದೇ ಬದುಕುವುದಿಲ್ಲ ಎಂದಾದರೇ ಪಾಕಿಸ್ತಾನಕ್ಕೆ ತೆರಳಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಹಾಗೂ ಸಂಸದೀಯ...

ನವದೆಹಲಿ: ಗೋಮಾಂಸ ತಿನ್ನದೇ ಬದುಕುವುದಿಲ್ಲ ಎಂದಾದರೇ ಪಾಕಿಸ್ತಾನಕ್ಕೆ ತೆರಳಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ವಿವಾದಕ್ಕೀಡಾಗಿದ್ದಾರೆ.
ಕೆಲವು ರಾಜ್ಯಗಳಲ್ಲಿ ಗೋಮಾಂಸ ಮಾರಾಟದ ಮೇಲೆ ಹೇರಿರುವ ನಿಷೇಧವನ್ನು ಸಮರ್ಥಿಸಿಕೊಂಡ ಮುಕ್ತಾರ್ ಅಬ್ಬಾಸ್ ನಖ್ವಿ, ಗೋಮಾಂಸ ತಿನ್ನಬೇಕೆಂದವರು ಪಾಕಿಸ್ತಾನಕ್ಕೆ ತೆರಳಬಹುದು. ಇದು ಲಾಭ ನಷ್ಟದ ವಿಷಯವಲ್ಲ, ಇದೊಂದು ಧರ್ಮದ ಮೇಲೆ ನಿಂತಿರುವ ನಂಬಿಕೆ ಮತ್ತು ವಿಶ್ವಾಸ. ಹಿಂದೂಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರವಾಗಿದೆ.
ಹಾಗಾಗಿ, ಯಾರಿಗೆ ಗೋಮಾಂಸ ತಿನ್ನಬೇಕು ಎಂದನಿಸುತ್ತದೆಯೋ, ಅಂತಹವರು ಪಾಕಿಸ್ತಾನ ಸೇರಿದಂತೆ ಅರಬ್ ದೇಶಗಳಿಗೆ ವಲಸೆ ಹೋಗಬಹುದು ಅಥವಾ ಇತರ ಯಾವುದೇ ದೇಶದಲ್ಲಿ ಗೋಮಾಂಸ ಲಭ್ಯವಿದೆಯೋ ಅಲ್ಲಿಗೆ ತೆರಳಬಹುದು ಎಂದು ಹೇಳಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಕೆಲವು ರಾಜ್ಯಗಳಲ್ಲಿ ಜಾರಿಗೆ ತಂದಿರುವ ಗೋಮಾಂಸ ಮಾರಾಟ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ವಿಶೇಷವಾಗಿ ಹೆಚ್ಚು ಮುಸ್ಲಿಂ ಜನಾಂಗ ಹೊಂದಿರುವ ರಾಜ್ಯಗಳಾದ ಗೋವಾ, ಜಮ್ಮು ಮತ್ತು ಕಾಶ್ಮೀರ, ಹಾಗೂ ಕೇರಳದಲ್ಲಿ ಈ ನಿಷೇಧವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ನಖ್ವಿ ಮುಸ್ಲಿಂಮರು ಸಹ ಗೋಮಾಂಸ ಸೇವನೆಯನ್ನು ವಿರೋಧಿಸುತ್ತಾರೆ ಎಂದಿದ್ದಾರೆ.
ಅಲ್ಪಸಂಖ್ಯಾತರ ಬಡತನವನ್ನು ತೊಡೆದುಹಾಕಲು ನರೇಂದ್ರ ಮೋದಿ ಅವರು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಸದ್ಯದಲ್ಲೇ ಇವು ಈಡೇರಲಿವೆ ಎಂದ ಅವರು, ಅಭಿವೃದ್ಧಿ ಕೆಲಸಗಳಿಂದ ಮುಸ್ಲಿಮರನ್ನು ದೂರ ಉಳಿಸಲಾಗಿತ್ತು. ಈಗ ನಮ್ಮ ಸರ್ಕಾರ ಅನೇಕ ಭದ್ರತಾ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮುಸ್ಲಿಂ ಜನಾಂಗಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


