ದೇಶ

ತೆಲಂಗಾಣ: 2 ದಿನದಲ್ಲಿ ಬಿಸಿಗಾಳಿ ಅಬ್ಬರಕ್ಕೆ 30 ಮಂದಿ ಬಲಿ

ಎರಡು ದಿನಗಳಿಂದ ತೆಲಂಗಾಣದಲ್ಲಿ ಉಷ್ಣ ಗಾಳಿ ಅಬ್ಬರಕ್ಕೆ ಇಲ್ಲಿವಯವರೆಗೂ ಒಟ್ಟು 30 ಜನರು ಮೃತಪಟ್ಟಿದ್ದಾರೆ...

ತೆಲಂಗಾಣ: 2 ದಿನದಲ್ಲಿ ಬಿಸಿಗಾಳಿ ಅಬ್ಬರಕ್ಕೆ 30 ಮಂದಿ ಬಲಿ
ಬಿಸಿಗಾಳಿ
Published On :

ಹೈದರಾಬಾದ್‌: ಎರಡು ದಿನಗಳಿಂದ ತೆಲಂಗಾಣದಲ್ಲಿ ಉಷ್ಣ ಗಾಳಿ ಅಬ್ಬರಕ್ಕೆ ಇಲ್ಲಿವಯವರೆಗೂ ಒಟ್ಟು 30 ಜನರು ಮೃತಪಟ್ಟಿದ್ದಾರೆ.

ನಲ್ಗೊಂಡ, ನಿಜಾಮಾಬಾದ್‌ ಮತ್ತು ಕರೀಂ ನಗರ ಬಿಸಿಗಾಳಿಯ ಪ್ರತಾಪಕ್ಕೀಡಾಗಿದ್ದು, ಇದು ಹೀಗೆ ಮುಂದುವರೆಯಲಿದ್ದು ಮುಂಬರುವ ದಿನಗಳಲ್ಲಿ ಬಿಸಿ ಗಾಳಿ ಜನರನ್ನು ಮತ್ತಷ್ಟು ಬಾಧಿಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ ಬಿಸಿ ಗಾಳಿಗೆ ಬಲಿಯಾದವರ ಸಂಖ್ಯೆ 30 ಆಗಿದೆ ಎಂದು ಕಂದಾಯ ಕಾರ್ಯದರ್ಶಿ ಬಿ ಆರ್‌ ಮೀಣ ತಿಳಿಸಿದ್ದಾರೆ.

ದಿನದ ಉಷ್ಣತೆಯು ಗರಿಷ್ಠ ಪ್ರಮಾಣದಲ್ಲಿರುವಾಗ ಜನರು ಹೊರಗೆ ಹೋಗ ಕೂಡದೆಂದು ಎಚ್ಚರಿಸಿರುವ ರಾಜ್ಯ ಸರಕಾರ, ಇಂತಹ ವಿಷಮ ಸಂದರ್ಭದಲ್ಲಿ ಜನರು ಮಾಡಬೇಕಾದ್ದು ಮತ್ತು ಮಾಡಬಾರದ್ದು ಯಾವುವು ಎಂಬುದನ್ನು ಪಟ್ಟಿಮಾಡಿ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.