ತ್ರಿರಾಷ್ಟ್ರ ಪ್ರವಾಸ ಅಂತ್ಯ: ಭಾರತಕ್ಕೆ ಬಂದಿಳಿದ ಮೋದಿ
ಪ್ರಧಾನಿ ಮೋದಿ ಅವರ ಮೂರು ದೇಶಗಳ ಆರು ದಿನಗಳ ಪ್ರವಾಸ ಅಂತ್ಯಗೊಂಡಿದ್ದು, ಬುಧವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದ್ದಾರೆ...

ನವದೆಹಲಿ: ಪ್ರಧಾನಿ ಮೋದಿ ಅವರ ಮೂರು ದೇಶಗಳ ಆರು ದಿನಗಳ ಪ್ರವಾಸ ಅಂತ್ಯಗೊಂಡಿದ್ದು, ಬುಧವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದ್ದಾರೆ.
ಪ್ರವಾಸದಲ್ಲಿ ಮೂಲಸೌಲಭ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಮಹತ್ವದ ಒಪ್ಪಂದಗಳಿಗೆ ಮೋದಿ ಸಹಿ ಹಾಕಿದ್ದಾರೆ. ಈ ಮೂಲಕ ಅವರು ಎರಡೂ ದೇಶಗಳ ನಡುವಿನ ಸಂಬಂಧವನ್ನು ಭದ್ರಗೊಳಿಸಿದ್ದಾರೆ. `ದಕ್ಷಿಣ ಕೊರಿಯಾ ಭೇಟಿ ತೃಪ್ತಿಕರವಾಗಿತ್ತು. ಕೊರಿಯಾ ಜನರು ಹಾಗೂ ಸರ್ಕಾರ ನನಗೆ ನೀಡಿದ ಆತಿಥ್ಯಕ್ಕೆ ನನ್ನ ಧನ್ಯವಾದಗಳು' ಎಂದು ದೆಹಲಿಯತ್ತ ಪ್ರಯಾಣ ಆರಂಭಿಸುವ ಮೊದಲು ಮೋದಿ ಟ್ವೀಟ್ ಮಾಡಿದ್ದಾರೆ.
ಕೊರಿಯಾ ಅಧ್ಯಕ್ಷ ಪಾರ್ಕ್ ಗೆಯುನ್- ಹೇಯ್ ಮತ್ತು ಉದ್ಯಮಪ್ರತಿನಿಧಿಗಳ ಜತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು. ಕೊರಿಯಾ ಮತ್ತು ಭಾರತದ ನಡುವಿನ ಸಹಕಾರವನ್ನು ಬಲಪಡಿಸುವ ನನ್ನ ಭಾವನೆ ಕುರಿತು ಚರ್ಚೆ ನಡೆಸಲಾಯಿತು. ಎರಡೂ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಆಪ್ತವಾಗಲಿದೆ ಮತ್ತು ಇದರಿಂದ ಎರಡೂ ದೇಶಗಳ ಜನರಿಗೆ ಅನುಕೂಲವಾಗಲಿದೆ ಎಂದು ನಾನು ವಿಶ್ವಾಸಪಟ್ಟಿದ್ದೇನೆ ಎಂದು ಮೋದಿ ಇದೇ ವೇಳೆ ಟ್ವೀಟ್ ಮೂಲಕ ಸಾರಿದ್ದಾರೆ.
ಹ್ಯುಂಡಾಯ್ ಘಟಕಕ್ಕೆ ಭೇಟಿ
ಪ್ರಧಾನಿ ಮೋದಿ ಮಂಗಳವಾರ ಹ್ಯುಂಡಾಯ್ ನ ಭಾರಿ ಕೈಗಾರಿಗಳ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿನ ಕೆಲಸ, ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ರಾಜಧಾನಿ ಸಿಯೋಲ್‍ನಿಂದ 400 ಕಿ.ಮೀ. ದೂರದ ಘಟಕಕ್ಕೆ ಭೇಟಿ ನೀಡಿದ ಅವರು, ಭಾರತದ ಜತೆಗೆ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಇನ್ನಷ್ಟು ಸಹ ಭಾಗಿತ್ವದ ವಿಚಾರ ಪ್ರಸ್ತಾಪಿಸಿದರು. ಈ ವೇಳೆ, ನೌಕಾ ರಕ್ಷಣೆ, ಎಲ್ ಎನ್ ಜಿ ಕ್ಯಾರಿಯರ್ ಕನ್ ಸ್ಟ್ರಕ್ಷನ್ ಆ್ಯಂಡ್ ಶಿಪ್ ಬಿಲ್ಡಿಂಗ್ ಟೆಕ್ನಾಲಜಿ ಕ್ಷೇತ್ರದಲ್ಲಿ ಹೆಚ್ಚಿನ ಸಹಭಾಗಿತ್ವಕ್ಕೆಕ ಸಂಬಂಧಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


