ದೇಶ

ಪುತ್ರಿಯ ಬಂಗಲೆ ನೋಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ನಿರತರಾಗಿದ್ದರೆ, ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ರಾಂತಿ ನಿಮಿತ್ತ ಹಿಮಾಚಲ ಪ್ರದೇಶದ ಗಿರಿಧಾಮದತ್ತ ಪಯಣ ಬೆಳಿಸಿದ್ದಾರೆ...

ಪುತ್ರಿಯ ಬಂಗಲೆ ನೋಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
Published On :

ಶಿಮ್ಲಾ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ನಿರತರಾಗಿದ್ದರೆ, ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ರಾಂತಿ ನಿಮಿತ್ತ ಹಿಮಾಚಲ ಪ್ರದೇಶದ ಗಿರಿಧಾಮದತ್ತ ಪಯಣ ಬೆಳಿಸಿದ್ದಾರೆ.

ಪುತ್ರಿ ಪ್ರಿಯಾಂಕಾತ ವಾದ್ರಾರ ಭವ್ಯ ಬಂಗಲೆ ನಿರ್ಮಾಣವಾಗುತ್ತಿರುವುದು ಅಲ್ಲಿಯೇ. ತಾಯಿ ಮಗಳು ಜೊತೆಯಲ್ಲಿಯೇ ಶಿಮ್ಲಾದ ಚರಾಬರಕ್ಕೆ ಭೇಟಿ ನೀಡಿದ್ದು, ಇದೇ ಮೊದಲ ಬಾರಿಗೆ ಪುತ್ರಿ ಕಟ್ಟಿಸುತ್ತಿರುವ ಬಂಗಲೆಯನ್ನು ನೋಡುತ್ತಿದ್ದಾರೆ.

ಭಾನುವಾರ ಸುದ್ದಿಗದ್ದಲವಿಲ್ಲದೆ ಅಲ್ಲಿಗೆ ಕಾಲಿಟ್ಟ ಸೋನಿಯಾ ಗಾಂಧಿಗೆ ಮಂಜುಗಟ್ಟಿದ ಪರ್ವತದ ನಡುವೆ ಸೋಬು ಹಾಗೂ ಚೆರ್ರಿ ಮರಗಳಿಂದ ಆವೃತವಾಗಿರುವ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಮಹಲನ್ನು ಕಂಡು ಪುಳಕ. ಇದೊಂದು ಖಾಸಗಿ ಪ್ರವಾಸವಾಗಿದ್ದರೂ ಬಿಡುವಿನ ಮಧ್ಯೆ ಸೋನಿಯಾ, ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಸುಖು ಜತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

2007 ರಲ್ಲಿ ಜಮೀನು ಖರೀದಿಸಿದ್ದ ಪ್ರಿಯಾಂಕಾ ಆರು ವರ್ಷಗಳಿಂದ ತಮ್ಮ ಪರಿಕಲ್ಪನೆಯಂತೆ ಬಂಗಲೆಗೆ ರೂಪ ನೀಡುತ್ತಲೇ ಇದ್ದಾರೆ. ಅದರಲ್ಲಿ ಏನೇ ವ್ಯತ್ಯಯವಾದರೂ ಮರುನಿರ್ಮಾಣಕ್ಕೂ ಹಿಂದು ಮುಂದು ನೋಡುತ್ತಿಲ್ಲ, ಇದೇ ಕಾರಣಕ್ಕೆ 2011 ರಲ್ಲಿ ಒಮ್ಮೆ ಎರಡು ಅಂತಸ್ತುಗಳನ್ನು ಕೆಡವಿಸಿದ್ದರು ಪ್ರಿಯಾಂಕಾ.

2012 ರ ನಂತರ ಮತ್ತೆ ಹೊಸತಾಗಿ ನಿರ್ಮಾಣ ಶುರುವಾಗಿ ಇದೀಗ ಮುಕ್ತಾಯ ಹಂತ ತಲುಪಿದೆ. ಮಾಜಿ ಪ್ರಧಾನಿ ವಾಜಪೇಯಿ ಹೊರತು ಪಡಿಸಿ ಕೆಲವೇ ಕೆಲವರಿಗೆ ಮಾತ್ರ ಹಿಮಾಚಲ ಪ್ರದೇಶದಲ್ಲಿ ಹೊರಗಿನವರಿಗೆ ಜಮೀನು ಖರೀದಿಸುವ ಅವಕಾಶ ಸಿಕ್ಕಿದ್ದು ಪ್ರಿಯಾಂಕ ಕೂಡ ಅಂಥ ಅದೃಷ್ಟಶಾಲಿ ಗಣ್ಯರಲ್ಲೊಬ್ಬರು ಎಂಬುದು ವಿಶೇಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.