ಪ್ರಮಾಣಿಕತೆ ಪ್ರದರ್ಶಿಸಿ ಗಿಲಾನಿ ವಿದೇಶಕ್ಕೆ ಹಾರಲಿ: ಬಿಜೆಪಿ
ಭಾರತ ವಿರೋಧಿ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿದ್ದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ ಅವರ ಪಾಸ್ ಪೋರ್ಟ್ ಅರ್ಜಿಯನ್ನು ಬಿಜೆಪಿ ತಿರಸ್ಕರಿಸಿದ್ದು, ಗಿಲಾನಿ ಮೊದಲು ಪ್ರಮಾಣಿಕತೆಯನ್ನು ಪ್ರದರ್ಶಿಸಲಿ ನಂತರ ವಿದೇಶಕ್ಕೆ ಹಾರಲಿ ಎಂದು ಹೇಳಿದೆ...

ನವದಹೆಲಿ: ಭಾರತ ವಿರೋಧಿ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿದ್ದ ಪ್ರತ್ಯೇಕವಾದಿ ನಾಯಕ ಸಯ್ಯದ್ ಅಲಿ ಗೀಲಾನಿ ಅವರ ಪಾಸ್ ಪೋರ್ಟ್ ಅರ್ಜಿಯನ್ನು ಬಿಜೆಪಿ ತಿರಸ್ಕರಿಸಿದ್ದು, ಗಿಲಾನಿ ಮೊದಲು ಪ್ರಮಾಣಿಕತೆಯನ್ನು ಪ್ರದರ್ಶಿಸಲಿ ನಂತರ ವಿದೇಶಕ್ಕೆ ಹಾರಲಿ ಎಂದು ಹೇಳಿದೆ.
ಅನಾರೋಗ್ಯದಿಂದ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಪುತ್ರಿ ಫಾರ್ಹತ್ ಜಬೀನ್ ಗಿಲಾನಿಯನ್ನು ನೋಡುವ ಸಲುವಾಗಿ ಗಿಲಾನಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಜಮ್ಮುಮತ್ತು ಕಾಶ್ಮೀರದ ಬಿಜೆಪಿಯು, ಗಿಲಾನಿ ಮೊದಲು ತಾನು ಹಿಂದು ಎಂಬುದನ್ನು ಧೃಡೀಕರಿಸಿ, ಈ ಹಿಂದೆ ತಾವು ನೀಡಿದ್ದ ಭಾರತ ವಿರೋಧಿ ಹೇಳಿಕೆಗಳಿಗೆ ಕ್ಷಮಾಪಣೆ ಕೇಳಲಿ ನಂತರ ಅವರಿಗೆ ಪಾಸ್ ಪೋರ್ಟ್ ನೀಡುತ್ತೇವೆ ಎಂದು ಹೇಳಿದೆ.
ಪಾಸ್ ಪೋರ್ಟ್ ನೀಡುವುದು ಭಾರತೀಯ ನಾಗರೀಕರಿಗೆ. ಭಾರತ ಮತ್ತು ಪ್ರಜಾಪ್ರಭುತ್ವವನ್ನು ನಂಬದೆ ಇರುವವರಿಗಲ್ಲ. ಭಾರತದ ಎಲ್ಲಾ ಸೌಲಭ್ಯಗಳನ್ನು ಪಡೆದು, ಇಲ್ಲೇ ನೆಲೆಸಿ ಈ ದೇಶದ ವಿರುದ್ಧವೇ ಪಿತೂರಿ ನಡೆಸಿ, ಭಾರತ ವಿರೋಧಿ ಹೇಳಿಕೆ ನೀಡುವವರಿಗೆ ಸರ್ಕಾರ ಪಾಸ್ ಪೋರ್ಟ್ ನೀಡುವುದಿಲ್ಲ ಎಂದು ಬಿಜೆಪಿ ವಕ್ತಾರ ಖಲಿದ್ ಜಹಾಂಗೀರ್ ಹೇಳಿದ್ದಾರೆ.
ಕಳೆದ 25 ವರ್ಷಗಳಿಂದ ಗಿಲಾನಿ ಹಲವು ತಪ್ಪುಗಳನ್ನು ಮಾಡಿದ್ದು, ತಮ್ಮ ಎಲ್ಲಾ ತಪ್ಪುಗಳಿಗೆ ಕ್ಷಮಾಪಣೆ ಕೇಳಬೇಕು. ನಂತರ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಗಿಲಾನಿ ಪ್ರಮಾಣೀಕರಿಸಿದರೆ ಭಾರತ ಸರ್ಕಾರ ಪಾಸ್ ಪೋರ್ಟ್ ಕುರಿತ ಅವರ ಮನವಿಯನ್ನು ಸ್ವೀಕರಿಸುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


