ಲಾಡೆನ್ ಪಾಕ್‍ನಲ್ಲಿದ್ದ ಮಾಹಿತಿ ನೀಡಿದ್ದು ಜರ್ಮನಿ ಗುಪ್ತಚರ ಸಂಸ್ಥೆ!
ಇಡೀ ಜಗತ್ತನ್ನೇ ನಡುಗಿಸಿದ್ದ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನ ಅಡಗುತಾಣದಲ್ಲಿ ಅಡಗಿ ಕುಳಿತಿದ್ದ ಮಾಹಿತಿ ಅಮೆರಿಕಕ್ಕೆ...

ಜರ್ಮನಿ: ಇಡೀ ಜಗತ್ತನ್ನೇ ನಡುಗಿಸಿದ್ದ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನ ಅಡಗುತಾಣದಲ್ಲಿ ಅಡಗಿ ಕುಳಿತಿದ್ದ ಮಾಹಿತಿ ಅಮೆರಿಕಕ್ಕೆ ಲಭಿಸಿದ್ದು ಹೇಗೆ ಗೊತ್ತೇ? ಜರ್ಮನಿಯ ಗೂಢಾಚಾರ ಸಂಸ್ಥೆಯಿಂದ!
ಅಮೆರಿಕ ಗುಪ್ತಚರ ಸಂಸ್ಥೆ (ಸಿಐಎ)ಗೆ ಲಾಡೆನ್ ಅಡಗುತಾಣವನ್ನು ಕಂಡುಹಿಡಿಯಲು ಜರ್ಮನಿಯ ಗುಪ್ತಚರ ಸಂಸ್ಥೆ (ಬಿಎನ್‍ಡಿ) ಸಹಾಯ ಮಾಡಿದ್ದಾಗಿ ಜರ್ಮನಿಯ ಮಾಧ್ಯಮಗಳು ವರದಿ ಮಾಡಿವೆ.
ಲಾಡೆನ್ ಪಾಕ್ ನಲ್ಲಿ ಅಡಗಿ ಕುಳಿತಿದ್ದು, ಈ ವಿಷಯ ಪಾಕಿಸ್ತಾನ ರಕ್ಷಣಾ ಪಡೆಗೂ ತಿಳಿದಿತ್ತು ಎಂಬ ವಿಷಯವನ್ನೂ ಸಿಐಎಗೆ ಬಿಎನ್‍ಡಿ ಹೇಳಿತ್ತು ಎಂಬ ವಿಷಯ ಇದೀಗ ಬಹಿರಂಗಪಡಿಸಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆಯಲ್ಲಿ ಆಂತರಿಕ ಸೇವೆಯ ಸಿಬ್ಬಂದಿ ಜತೆ ಸಂಪರ್ಕದಲ್ಲಿದ್ದ ಬಿಎನ್‍ಡಿ ಮಾಹಿತಿದಾರ, ಲಾಡೆನ್ ಅಡಗಿರುವ ವಿಷಯವನ್ನು ಖಚಿತಪಡಿಸಿದ್ದ ಎಂದು ಹೆಸರು ಹೇಳಲಿಚ್ಚಿಸದ ಅಮೆರಿಕ ಗುಪ್ತಚರ ಸಂಸ್ಥೆ ಸಿಬ್ಬಂದಿಯೊಬ್ಬ ಪತ್ರಿಕೆಗೆ ಹೇಳಿಕೆ ನೀಡಿದ್ದಾನೆ.
2011, ಸೆ. 11ರ ಅಮೆರಿಕದ ಅವಳಿ ಕಟ್ಟಡದ ಮೇಲಿನ ದಾಳಿ ರೂವಾರಿಯಾಗಿರುವ ಲಾಡೆನ್‍ನನ್ನು ಸದೆಬಡೆಯುವುದು ತುರ್ತಾಗಿ ಆಗಬೇಕಾದ ಕೆಲಸ ಎಂದು ಹೇಳಿಕೆ ನೀಡಿದ್ದ ಜರ್ಮನಿ ಸರ್ಕಾರ ಅಮೆರಿಕದೊಂದಿಗೆ ಕೈಜೋಡಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕ್‍ನ ಅಬೊ ಟಾಬಾದ್ ನಲ್ಲಿ ಅಡಗಿದ್ದ ಎಂಬ ವಿಷಯವನ್ನು ಪತ್ತೆ ಹಚ್ಚಿದ ಅಮೆರಿಕ ಸೇನೆ ಲಾಡೆನ್‍ನನ್ನು ಹತ್ಯೆ ಮಾಡಿತ್ತು.
ಅಮೆರಿಕ ರಾಷ್ಟ್ರೀಯ ರಕ್ಷಣಾ ಸಂಸ್ಥೆ (ಎನ್‍ಎಸ್‍ಎ)ಗೆ ಬಿಎನ್‍ಡಿ ಮಾಹಿತಿ ಕೊಟ್ಟಿದ್ದು ಕೇವಲ ಉಗ್ರವಾದಿಗಳು ಮತ್ತು ಸಮಾಜಘಾತುಕರನ್ನು ಸದೆಬಡಿಯಲಷ್ಟೇ ಅಲ್ಲ. ರಾಜಕೀಯ ಮತ್ತು
ಉದ್ಯಮದ ಷಡ್ಯಂತ್ರ ಇದರಲ್ಲಿ ಅಡಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


