ಸ್ಕಾರ್ಫ್ ಧರಿಸಿದ್ದಕ್ಕೆ ವಿದ್ಯಾರ್ಥಿನಿಗೆ ನಿರ್ಬಂಧ ಹೇರಿದ ಶಾಲಾ ಆಡಳಿತ ಮಂಡಳಿ
ಹೆಡ್ ಸ್ಕಾರ್ಫ್ (ಹೈಜಾಬ್ನ) ಧರಿಸಿದ್ದಕ್ಕೆ ವಿದ್ಯಾರ್ಥಿನಿಯೋರ್ವಳಿಗೆ ತರಗತಿ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದಾರೆ.

ಲಖನೌ: ಹೆಡ್ ಸ್ಕಾರ್ಫ್ (ಹೈಜಾಬ್ನ) ಧರಿಸಿದ್ದಕ್ಕೆ ವಿದ್ಯಾರ್ಥಿನಿಯೋರ್ವಳಿಗೆ ತರಗತಿ ಪ್ರವೇಶಿಸಲು ಅನುಮತಿ ನಿರಾಕರಿಸಿದ ಘಟನೆ ಲಖನೌನ ಸಂತ ಜೋಸೆಫ್ ಇಂಟರ್ ಕಾಲೇಜ್ ನಲ್ಲಿ ನಡೆದಿದೆ.
ಐ.ಸಿ.ಎಸ್.ಸಿ ಪರೀಕ್ಷಾ ಮಂಡಳಿ ವ್ಯಾಪ್ತಿಗೆ ಬರುವ ಸಂತ ಜೋಸೆಫ್ ಇಂಟರ್ ಕಾಲೇಜ್ ಶಾಲೆಯಲ್ಲಿ ೯ನೇ ತರಗತಿ ಓದುತ್ತಿರುವ ಫರ್ಹೀನ್ ಫಾತಿಮಾ ಎಂಬ ವಿದ್ಯಾರ್ಥಿನಿ ಹೆಡ್ ಸ್ಕಾರ್ಫ್ ಧರಿಸಿ ಶಾಲೆಗೇ ಆಗಮಿಸಿದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಆಕೆಗೆ ಎರಡು ದಿನಗಳ ಕಾಲ ತರಗತಿ ಪ್ರವೇಶಿಸಲು ನಿರ್ಬಂಧ ವಿಧಿಸಿದೆ.
ಘಟನೆಯಿಂದ ತೀವ್ರವಾಗಿ ನೊಂದ ವಿದ್ಯಾರ್ಥಿನಿ, ಶಾಲಾ ಆಡಳಿತ ಮಂಡಳಿ ಕ್ರಮದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಕೂಡಲೇ ಶಾಲೆಗೇ ಆಗಮಿಸಿದ ಪೋಷಕರು, ತಮ್ಮ ಧರ್ಮದಲ್ಲಿ ಹೆಣ್ಣುಮಕ್ಕಳು ಹೆಡ್ ಸ್ಕಾರ್ಫ್ ಧರಿಸುವುದು ಕಡ್ಡಾಯವಾಗಿರುವುದರಿಂದ ಫರ್ಹೀನ್ ಫಾತಿಮಾ ಧರಿಸಿ ತರಗತಿ ಪ್ರವೇಶಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಆದರೆ ಶಾಲೆಯಲ್ಲಿರುವ ಡ್ರೆಸ್ ಕೋಡ್ ನಿಯಮವನ್ನು ಮುಂದಿತ್ತಿರುವ ಶಾಲಾ ಆಡಳಿತ ಮಂಡಳಿ ಅನುಮತಿ ನೀಡಲು ನಿರಾಕರಿಸಿದೆ. ಇದರಿಂದ ಮತ್ತಷ್ಟು ಹತಾಶೆಗೊಳಗಾಗಿರುವ ಪೋಷಕರು, ಶಾಲೆಗೆ ಸೇರುವ ದಿನಂದದೂ ಫರ್ಹೀನ್ ಫಾತಿಮಾ ಹೆಡ್ ಸ್ಕಾರ್ಫ್ ಧರಿಸಿಯೇ ಇದ್ದಳು ಆಗ ವಿರೋಧ ವ್ಯಕ್ತಪಡಿಸದ ಆಡಳಿತ ಮಂಡಳಿ ಈಗೇಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಸಂತ ಜೋಸೆಫ್ ಇಂಟರ್ ಕಾಲೇಜ್ ಶಾಲೆ ಧಾರ್ಮಿಕ ನೆಲೆಗಟ್ಟಿನಲ್ಲಿ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ನಹೀದ್ ಖಾನ್, ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಂತರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಹೆಡ್ ಸ್ಕಾರ್ಫ್ ಧರಿಸಿ ಶಾಲೆಗೆ ಬರುವ ಬಗ್ಗೆ ಹಲವು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದೆ ಆದರೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದ್ದರಿಂದ ಶಾಲೆ ಧಾರ್ಮಿಕ ನೆಲೆಗಟ್ಟಿನಲ್ಲಿ ತಾರತಮ್ಯ ತೋರುತ್ತಿದೆ ಎಂಬ ಅನುಮಾನ ಬಲವಾಗಿದ್ದು ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


