ಅಕ್ರಮ ಸಂಬಂಧ ಮುಂದುವರಿಕೆಗೆ ಯುವಕನ ಒತ್ತಾಯ: ಮರ್ಮಾಂಗ ಕತ್ತರಿಸಿದ ಮಹಿಳೆ
ತನ್ನೊಂದಿಗಿನ ಅಕ್ರಮ ಸಂಬಂಧವನ್ನು ಮತ್ತೆ ಮುಂದುವರೆಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬನ ಮರ್ಮಾಂಗವನ್ನು ಮಹಿಳೆಯೊಬ್ಬಳು ಕತ್ತರಿಸಿ ಹಾಕಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ...

ಪಾಟ್ನಾ: ತನ್ನೊಂದಿಗಿನ ಅಕ್ರಮ ಸಂಬಂಧವನ್ನು ಮತ್ತೆ ಮುಂದುವರೆಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬನ ಮರ್ಮಾಂಗವನ್ನು ಮಹಿಳೆಯೊಬ್ಬಳು ಕತ್ತರಿಸಿ ಹಾಕಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಪಾಟ್ನಾದಿಂದ ಸುಮಾರು 162 ಕಿ.ಮೀ ದೂರದಲ್ಲಿರುವ ಗೋಪಾಲ್ ಗಂಜ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಪಾರ್ವತಿ ದೇವಿ ಎಂಬ ಮಹಿಳೆಯೊಂದಿಗೆ 26 ವರ್ಷದ ಅಶೋಕ್ ಎಂಬಾತ ಅಕ್ರಮ ಸಂಬಂಧವಿರಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಈ ವಿಚಾರ ಊರ ಹಿರಿಯರಿಗೆ ತಿಳಿದು ಅವರು ಆಶೋಕನನ್ನು ಊರಿನಿಂದ ಬಹಿಷ್ಕರಿಸಿದ್ದರು. ಕೆಲಕಾಲ ಪಾರ್ವತಿ ದೇವಿಯಿಂದ ದೂರವಿದ್ದ ಅಶೋಕ್ ಕಳೆದ ವಾರ ಮತ್ತೆ ಊರಿಗೆ ಆಗಮಿಸಿದ್ದ. ಬಳಿಕ ಆಗಾಗ ಆಕೆಯ ಮನೆಗೆ ಹೋಗಿ ಪಾರ್ವತಿ ದೇವಿಯನ್ನು ಮತ್ತೆ ಅಕ್ರಮ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ. ಆದರೆ ಅಶೋಕನ ಒತ್ತಾಯಕ್ಕೆ ಮಣಿಯದ ಪಾರ್ವತಿ ದೇವಿ ಆತನನ್ನು ಹಲವು ಬಾರಿ ದೂರ ತಳ್ಳಿದ್ದಳು.
ಶನಿವಾರ ಮತ್ತೆ ಪಾರ್ವತಿ ದೇವಿ ಮನೆಗೆ ಆಗಮಿಸಿದ ಅಶೋಕ ಆಕೆಯೊಂದಿಗೆ ಮತ್ತೆ ಅಕ್ರಮ ಸಂಬಂಧಕ್ಕಾಗಿ ಜಗಳಕ್ಕಿಳಿದಿದ್ದಾನೆ. ಇದರಿಂದ ತೀವ್ರ ಬೇಸತ್ತ ಪಾರ್ವತಿ ದೇವಿ ತನ್ನ ನೆರೆಮನೆಯ ಕೆಲವರ ಸಹಾಯದೊಂದಿಗೆ ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ. ಮರ್ಮಾಂಗಕ್ಕೆ ಕತ್ತರಿ ಬೀಳುತ್ತಿದ್ದಂತೆ ಅಶೋಕ್ ಚೀರಾಡಿದ್ದು, ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಸ್ತುತ ಅಶೋಕ್ ನ ಪರಿಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಕರಣ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಶೋಕ್ ನ ಕುಟುಂಬಸ್ಥರೆಲ್ಲರೂ ಆಸ್ಪತ್ರೆಯಲ್ಲಿರುವುದರಿಂದ ಈ ವರೆಗೂ ಯಾರೂಕೂಡ ದೂರು ನೀಡಿಲ್ಲ ಎಂದು ಪೊಲೀಸ್ ಅಧಿಕಾರಿ ನೌಷಾದ್ ಆಲಂ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


