ದೇಶ

ಪ್ರಭಾವಶಾಲಿ ಕಾಂಗ್ರೆಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಹಿಂದೂ ಮಹಿಳೆ ತುಳಸಿ

ಕಾಂಗ್ರೆಸ್‌ನ 25 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಅಮೆರಿಕದ ಸಂಸದರಾಗಿರುವ ತುಳಸಿ ಗಬ್ಬರ್ಡ್‌ ಸ್ಥಾನ ಪಡೆದುಕೊಂಡಿದ್ದಾರೆ...

ಪ್ರಭಾವಶಾಲಿ ಕಾಂಗ್ರೆಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಹಿಂದೂ ಮಹಿಳೆ ತುಳಸಿ
ತುಳಸಿ ಗಬ್ಬಾರ್ಡ್
Published On :

ವಾಷಿಂಗ್ಟನ್‌: ಅಮೆರಿಕದ ಕಾಂಗ್ರೆಸ್‌ನ 25 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಅಮೆರಿಕದ ಸಂಸದರಾಗಿರುವ ತುಳಸಿ ಗಬ್ಬರ್ಡ್‌ ಸ್ಥಾನ ಪಡೆದುಕೊಂಡಿದ್ದಾರೆ.

ತುಳಸಿ ಗಬ್ಬರ್ಡ್‌ ಅವರು ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಂಗ್ರೆಸ್‌ನ ಏಕೈಕ ಹಿಂದೂ ಸದಸ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಕ್ಯೂ-ರೋಲ್‌ ಕಾಲ್ಸ್‌ ನ ಹೊಸ ಪುಸ್ತಕದಲ್ಲಿ ಪ್ರಕಟಿಸಲಾಗಿರುವ "ಪ್ರಭಾವಶಾಲಿ ಮಹಿಳೆಯರು ಕಾಂಗ್ರೆಸ್‌ನ 25ಪ್ರಭಾವಶಾಲಿ ಮಹಿಳೆಯರು' ಪಟ್ಟಿಯಲ್ಲಿ ತುಳಸಿ ಗಬ್ಬರ್ಡ್‌ನ ಹೆಸರು ಕಾಣಿಸಿಕೊಂಡಿದೆ.

ಸಂಸದೆಯಾಗಿರುವ ತುಳಸಿ ಗಬ್ಬರ್ಡ್‌ ಡೆಮೊಕ್ರಾಟ್ಸ್‌ ಮತ್ತು ರಿಪಬ್ಲಿಕನ್ಸ್‌ರೊಂದಿಗೆ ಸೌಹಾರ್ದ ಯುತವಾಗಿ ಕಾರ್ಯ ನಿರ್ವಹಿಸುವ ಜತೆಯಲ್ಲಿ ಸೇನೆ ಮತ್ತು ವಿದೇಶಾಂಗ ವ್ಯವಹಾರಗಳಿಗಾಗಿನ ಸಶಸ್ತ್ರ ಸೇವೆಗಳಿಗಾಗಿನ ಸದನ ಸಮಿತಿ ಮತ್ತು ವಿದೇಶಾಂಗ ವ್ಯವಹಾರಗಳಿಗಾಗಿನ ಸದನ ಸಮಿತಿಯ ಸದಸ್ಯರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪುಸ್ತಕದಲ್ಲಿ ಗಬ್ಬರ್ಡ್‌ ಅವರನ್ನು ಕೊಂಡಾಡಲಾಗಿದೆ. ತುಳಸಿ ಗಬ್ಬರ್ಡ್‌ ಅವರು ಕಾಂಗ್ರೆಸ್‌ನ್ನು ಡೆಮಾಕ್ರಾಟ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.