ಭೂಸ್ವಾಧೀನ ವಿಧೇಯಕ ಸಮಿತಿಗೆ ರಾಜ್ಯಸಭೆಯಿಂದ 10 ಸದಸ್ಯರ ನೇಮಕ
ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಭೂಸ್ವಾಧೀನ ವಿಧೇಯಕವನ್ನು ಸಂಸತ್ತಿನ ಜಂಟಿ ಸಮಿತಿ...

ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಭೂಸ್ವಾಧೀನ ವಿಧೇಯಕವನ್ನು ಸಂಸತ್ತಿನ ಜಂಟಿ ಸಮಿತಿ ಪರಿಶೀಲನೆಗೆ ಒಪ್ಪಿಸಿದ್ದು, ಇಂದು ಈ ಸಮಿತಿಗೆ ರಾಜ್ಯಸಭೆಯಿಂದ 10 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿಯಿಂದ ಪ್ರಭಾತ್ ಜಾ ಮತ್ತು ರಾಮ್ ನರೇನ್ ದುದಿ, ಕಾಂಗ್ರೆಸ್‌ನಿಂದ ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್ ಮತ್ತು ಪಿ.ಎಲ್.ಪುನಿಯಾ, ಸಮಾಜವಾದಿ ಪಕ್ಷದಿಂದ ರಾಮ್ ಗೋಪಾಲ್ ಯಾದವ್, ಜೆಡಿಯುನಿಂದ ಶರದ್ ಯಾದವ್, ತೃಣಮೂಲ ಕಾಂಗ್ರೆಸ್‌ನಿಂದ ಡೆರೆಕ್ ಒಬ್ರೇನ್, ಬಿಎಸ್‌ಪಿಯಿಂದ ರಾಜಪಾಲ್ ಸಿಂಗ್ ಸೈನಿ ಮತ್ತು ಎನ್‌ಸಿಪಿಯಿಂದ ಶರದ್ ಪವಾರ್ ಅವರನ್ನು ಸಂಸತ್ತಿನ ಜಂಟಿ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಸ್ವಾಧೀನ ವಿಧೇಯಕ ಸಂಬಂಧ ನಿನ್ನೆ ಲೋಕಸಭೆ 30 ಸದಸ್ಯರ ಜಂಟಿ ಸಮಿತಿ ರಚಿಸಿತ್ತು. ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ಸಮಿತಿ ಈ ವಿಧೇಯಕವನ್ನು ಪರಿಶೀಲಿಸಿ ಮುಂಗಾರು ಅಧಿವೇಶನದ ಮೊದಲ ದಿನ ತನ್ನ ವರದಿ ಸಲ್ಲಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


