ದೇಶ

ಸಿಎಜಿ ವರದಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ: ಗಡ್ಕರಿ

ಮಹಾಲೇಖಪಾಲ ವರದಿಗೆ ಸಂಬಂಧಿಸಿ ಕಾಂಗ್ರೆಸ್‍ನಿಂದ ತೀವ್ರ ದಾಳಿಗೆ ಗುರಿಯಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಸಂಸತ್ ನಲ್ಲಿ ಮೌನ ಮುರಿದಿದ್ದಾರೆ...

ಸಿಎಜಿ ವರದಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ: ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
Published On :

ನವದೆಹಲಿ: ಮಹಾಲೇಖಪಾಲ ವರದಿಗೆ ಸಂಬಂಧಿಸಿ ಕಾಂಗ್ರೆಸ್‍ನಿಂದ ತೀವ್ರ ದಾಳಿಗೆ ಗುರಿಯಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಸಂಸತ್ ನಲ್ಲಿ ಮೌನ ಮುರಿದಿದ್ದಾರೆ.

ಅವರ ಕುಟುಂಬದ ಪೂರ್ತಿ ಗ್ರೂಪ್ ಕಂಪನಿಗೆ ಸಾಲ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂಬ ಸಿಎಜಿ ವರದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಗಡ್ಕರಿ ವಿರುದ್ಧ ಸಮರ ಸಾರಿರುವ ಬೆನ್ನಲ್ಲೇ ಸೋಮವಾರ ಸಚಿವ ಗಡ್ಕರಿ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಿಎಜಿ ವರದಿಯನ್ನು ಉದ್ದೇಶ ಪೂರ್ವಕವಾಗಿ ರಾಜಕೀಯ ಕಾರಣಗಳಿಗೋಸ್ಕರ ತಪ್ಪಾಗಿ ಅರ್ಥೈಸಿಳ್ಳಲಾಗುತ್ತಿದೆ. ಆಡಿಟರ್ ಎಲ್ಲಿಯೂ ನಾನು ತಪ್ಪಿತಸ್ಥ ಎಂದು ಹೇಳಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಆದರೆ ಇವರ ಹೇಳಿಕೆಯಿಂದ ತೃಪ್ತಿಗೊಳ್ಳದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಭಾರಿ ಗದ್ದಲ ಎಬ್ಬಿಸಿದರು. ಗಡ್ಕರಿ ರಾಜಿನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ 5 ಬಾರಿ ಕಲಾಪ ಮುಂದೂಡಿ, ಕೊನೆಗೆ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.

ಭ್ರಷ್ಟಾಚಾರವನ್ನು ಸಹಿಸುವುದೇ ಇಲ್ಲ ಎಂದು ಪದೇ ಪದೆ ಪ್ರಧಾನಿ ಮೋದಿ ಹೇಳುತ್ತಲೇ ಇರುತ್ತಾರೆ. ಈಗ ಗಡ್ಕರಿ ವಿಚಾರದಲ್ಲಿ ಅವರೇನು ಮಾಡುತ್ತಾರೆ ಎಂಬುದಕ್ಕೆ ನಾವು ಕಾಯುತ್ತಿದ್ದೇವೆ. ಗಡ್ಕರಿ ಸಚಿವರಾಗಿ ಇರುವವರೆಗೆ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ.
-ಆನಂದ್ ಶರ್ಮಾ, ಕಾಂಗ್ರೆಸ್ ನಾಯಕ

ಈವರೆಗೆ ಪ್ರತಿಪಕ್ಷಗಳು ಗಡ್ಕರಿ ಪ್ರತಿಕ್ರಿಯಿಸಲಿ ಎಂದು ಒತ್ತಾಯಿಸುತ್ತಿದ್ದವು. ಈಗ ಅವರೇ ಸದನಕ್ಕೆ ಬಂದು ಪ್ರತಿಕ್ರಿಯಿಸುವಾಗ ಅದನ್ನು ಕೇಳಲು ಯಾರೂ ತಯಾರಿಲ್ಲ. ಜತೆಗೆ ಅವರ  ಜಿನಾಮೆ ಕೇಳುತ್ತಿದ್ದೀರಿ. ನಿಮಗೋಸ್ಕರ ಅವರು ರಾಜಿನಾಮೆ ಕೊಡುವುದಿಲ್ಲ. ಅವರ ವಿರುದ್ಧ ಭ್ರಷ್ಟಾಚಾರ ಆರೋಪವೇ ಇಲ್ಲ.
-ಮುಖ್ತಾರ್ ಅಬ್ಬಾಸ್ ನಖ್ವಿ, ಬಿಜೆಪಿ ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.