ಹೆಚ್ಚು ಬದಲಾಗಿಲ್ಲ ಕ್ಯಾಮರೂನ್ ಸಂಪುಟ
ಎರಡನೇ ಬಾರಿಗೆ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಡೇವಿಡ್ ಕ್ಯಾಮರೂನ್ ತಮ್ಮ ಹಳೆಯ ಸಂಪುಟವನ್ನೇ ಉಳಿಸಿಕೊಂಡಿದ್ದಾರೆ.

ಲಂಡನ್: ಎರಡನೇ ಬಾರಿಗೆ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಡೇವಿಡ್ ಕ್ಯಾಮರೂನ್ ತಮ್ಮ ಹಳೆಯ ಸಂಪುಟವನ್ನೇ ಉಳಿಸಿಕೊಂಡಿದ್ದಾರೆ.
ಹಣಕಾಸು, ಗೃಹ ಮತ್ತು ವಿದೇಶಾಂಗ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾರ್ಜ್ ಒಸ್ಬೋರ್ನ್ ಗೃಹ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಕ್ಯಾಮರೂನ್‍ರ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಭಾರತೀಯ ಮೂಲದ ಪ್ರೀತಿ ಪಟೇಲ್‍ಗೆ ಈ ಬಾರಿ ಪದೋನ್ನತಿ ಸಿಗುವ ಸಾಧ್ಯತೆ ಇದೆ.
ಇದರ ಜತೆಗೆ ಇನ್ ಫೋಸಿಸ್ ಸಂಸ್ಥಾಪಕ ರಿಶಿ ಸುನಕ್‍ಗೆ ಕೂಡ ಸ್ಥಾನ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹತ್ತು ಮಂದಿ ಭಾರತೀಯ ಮೂಲದ ನಾಗರಿಕರು ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬ್ರಿಟನ್ ಕಾನೂನಿನ ಪ್ರಕಾರ 109 ಮಂದಿಯನ್ನು ಸಚಿವರಾಗಿ ನೇಮಿಸಿಕೊಳ್ಳಲು ಅವಕಾಶ ಉಂಟು. ಪ್ರಸಕ್ತ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದಿರುವ ಕ್ಯಾಮರೂನ್‍ರ ಕನ್ಸರ್ವೇಟಿವ್ ಪಕ್ಷ, ಹಿಂದಿನ ಮೈತ್ರಿ ಪಕ್ಷ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ಸಂಸದರನ್ನು ಸಂಪುಟಕ್ಕೆ ನೇಮಿಸದಿರಲು ಕ್ಯಾಮರೂನ್ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


