ಅಧಿಕಾರಿಗಳ ನಿದ್ದೆಗೆಡಿಸಿದ ಮೋದಿ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕೇಂದ್ರ ಸರ್ಕಾರದ ಅನೇಕ ಉನ್ನತ ಅಧಿಕಾರಿಗಳ ನಿದ್ದೆಗೆಟ್ಟಿದೆ. ಕೆಲಸದ ಒತ್ತಡದಿಂದಾಗಿ ಅನೇಕ ಅಧಿಕಾರಿಗಳು ಭಾನುವಾರವೂ ಕಚೇರಿಯಲ್ಲೇ ಕಳೆಯುತ್ತಿದ್ದಾರೆ.

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕೇಂದ್ರ ಸರ್ಕಾರದ ಅನೇಕ ಉನ್ನತ ಅಧಿಕಾರಿಗಳ ನಿದ್ದೆಗೆಟ್ಟಿದೆ. ಕೆಲಸದ ಒತ್ತಡದಿಂದಾಗಿ ಅನೇಕ ಅಧಿಕಾರಿಗಳು ಭಾನುವಾರವೂ ಕಚೇರಿಯಲ್ಲೇ ಕಳೆಯುತ್ತಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ತಮ್ಮ ಕಚೇರಿಯ ಮೂಲಯೊಂದರಲ್ಲಿ ದಿವಾನವೊಂದಕ್ಕೆ ಜಾಗ ಮಾಡಿದ್ದಾರೆ. ವಾರದ ಏಳೂ ದಿನವನ್ನು ಕಚೇರಿಯಲ್ಲೇ ಕೆಲಸದಲ್ಲೇ ಬ್ಯುಸಿಯಾಗಿರುವ ಅವರಿಗೆ ಅನೇಕ ಬಾರಿ ಮನೆಗೆ ಹೋಗುವಷ್ಟೂ ಪುರುಸೊತ್ತು ಸಿಗುವುದಿಲ್ಲ. ಹಾಗಾಗಿ ಈ ದಿವಾನವನ್ನೇ ಬೆಡ್ ಆಗಿ ಪರಿವರ್ತಿಸಿಕೊಂಡಿದ್ದಾರೆ. ಮೋದಿ ಅವರು ಸ್ವತಃ ದುಡಿಮೆಯ ಗೀಳಿನ ಪ್ರಧಾನಿ. ಹಾಗಾಗಿ ಜೈಶಂಕರ್ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಬಹುತೇಕ ಉನ್ನತ ಅಧಿಕಾರಿಗಳೂ ಮೋದಿಯ ಕೆಲಸದ ವೇಗಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾರೆ. ಪ್ರಮುಖ ಅಧಿಕಾರಿಗಳಷ್ಟೇ ಅಲ್ಲ, ಕೆಲ ಸಚಿವಾಲಯಗಳೂ ಹೆಚ್ಚುವರಿ ಸಮಯವನ್ನು ಸರ್ಕಾರಿ ಕೆಲಸಕ್ಕಾಗಿ ವಿನಿಯೋಗಿಸುತ್ತಿವೆ. ಮೋದಿ ಅವರು ಮಲಗುವುದೇ ನಾಲ್ಕರಿಂದ ಐದು ಗಂಟೆಗಳು.
ಇನ್ನು ಅವರಿಗೆ ಭಾನುವಾರ ಎನ್ನುವುದೇ ಇಲ್ಲ. ಬಹುತೇಕ ಅವರ ರಾಜಕೀಯ ಕಾರ್ಯಕ್ರಮಗಳು, ಅಧಿಕೃತ ಭೇಟಿಗಳು ಬಹುತೇಕ ಭಾನುವಾರವೇ ನಿಗದಿಯಾಗುತ್ತವೆ ಎಂದು ಪ್ರಧಾನಿ ಕಾರ್ಯಾಲಯ ಹೇಳುತ್ತದೆ. ಪ್ರಧಾನಿ ಅವರೇ ಭಾನುವಾರವನ್ನು ಸರ್ಕಾರದ ಕೆಲಸದಲ್ಲಿ ಕಳೆಯುವುದರಿಂದ ಅವರ ಪ್ರಮುಖ ತಂಡಕ್ಕೂ ರಜೆ ಇಲ್ಲದಂತಾಗಿದೆ. ಪ್ರಧಾನಿ ಕಾರ್ಯಾಲಯದಲ್ಲಿರುವ ನಿರ್ದೇಶಕರು ಹಾಗೂ ಅವರ ಮೇಲಿನ ರ್ಯಾಂಕಿನ ಅಧಿಕಾರಿಗಳು ವಾರದ ಎಲ್ಲ ದಿನವೂ ಕಚೇರಿಯಲ್ಲಿ ಲಭ್ಯರಿರುತ್ತಾರೆ.
ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಮತ್ತು ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ
ಜಗದೀಶ್ ಠಕ್ಕರ್ ಮೋದಿಯ ಪ್ರಮುಖ ತಂಡದ ಸದಸ್ಯರಾದಂದಿನಿಂದ ಭಾನುವಾರ ರಜೆಯನ್ನೇ ತೆಗೆದುಕೊಂಡಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೆಲ ಭಾನುವಾರ ಕಚೇರಿಯಲ್ಲೇ ಇರುತ್ತಾರೆ. ಅನೇಕ ಬಾರಿ ರಜಾ ದಿನಗಳಲ್ಲೂ ಅಧಿಕಾರಿಗಳ ಸಭೆ ನಡೆಸುತ್ತಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


