ಭೂಗತ ಪಾತಕಿ ದಾವೂದ್ ನನ್ನು ಭಾರತಕ್ಕೆ ಕರೆತರುತ್ತೇವೆ: ರಾಜನಾಥ್ ಸಿಂಗ್
ಭೂಗತ ಪಾತಕಿ 26/11 ಮಂಬೈ ಸ್ಫೋಟದ ರೂವಾರಿ ಉಗ್ರ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಕರೆ ತರಲು ಎಲ್ಲಾ ರೀತಿಯ.......

ನವದೆಹಲಿ: ಭೂಗತ ಪಾತಕಿ 26/11 ಮಂಬೈ ಸ್ಫೋಟದ ರೂವಾರಿ ಉಗ್ರ ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಕರೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು ದಾವೂದ್ ಪಾಕಿಸ್ತಾನದಲ್ಲಿರುವ ಖಚಿತ ಮಾಹಿತಿ ಭಾರತಕ್ಕೆ ಲಭಿಸಿದೆ ಎಂದರು.
ಪಾತಕಿ ದಾವೂದ್ ನನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ಪಾಕಿಸ್ತಾನದ ಮೇಲೆ ಒತ್ತಡ ಹಾಕುತ್ತಿರುವುದಾಗಿ ಹೇಳಿದ ರಾಜನಾಥ್ ಸಿಂಗ್ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೇವೆ. ಆದರೆ ಪಾಕಿಸ್ತಾನ ಏಜೆನ್ಸಿಗಳು ಭಾರತದ ಅಧಿಕಾರಿಗಳೊಂದಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದರು.
ಆದರೆ ಯಾವ ಜಾಗದಲ್ಲಿದ್ದಾನೆ ಎಂಬ ನಿಖರ ಮಾಹಿತಿ ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದರು. ದಾವೂದ್ ಇಬ್ರಾಹಿಂ ನನ್ನು ತಮ್ಮ ವಶಕ್ಕೆ ನೀಡಬೇಕೆಂದು ಪಾಕಿಸ್ತಾನ ಸರ್ಕಾರಕ್ಕೆ ಕೋರಿರುವುದಾಗಿ ತಿಳಿಸಿದ್ರು.
ದಾವೂದ್ ಕರಾಚಿಯಿಂದ ದುಬೈಗೆ ಹೋಗಿರುವ ಮಾಹಿತಿ ಇತ್ತು. ಆದರೆ ಆತನ ವಿರುದ್ಧ ರೆಡ್ ಕಾರ್ಪೆಟ್ ನೋಟಿಸ್ ಜಾರಿ ಮಾಡಿದ ಮೇಲೆ ಆತ ದಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ. ದಾವೂದ್ ನನ್ನು ಭಾರತದ ವಶಕ್ಕೆ ನೀಡುವುದು ಪಾಕಿಸ್ತಾನಕ್ಕೆ ಒಪ್ಪಿಗೆಯಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


