ದೇಶ

ಮೋದಿ ಜೀವನ ಬದಲಾಯಿಸಿದ ಸ್ವಾಮಿ

ಮೇ 9ರಂದು ಕೋಲ್ಕತಾಗೆ ಆಗಮಿಸಲಿರುವ ಮೋದಿ, ತಮ್ಮ ಜೀವನವನ್ನು ಬದಲಾಯಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿಯನ್ನು ಭೇಟಿಯಾಗಲಿದ್ದಾರೆ...

ಮೋದಿ ಜೀವನ ಬದಲಾಯಿಸಿದ ಸ್ವಾಮಿ
ಪ್ರಧಾನಿ ನರೇಂದ್ರ ಮೋದಿ
Published On :

ಕೋಲ್ಕತಾ: ಮೇ 9ರಂದು ಕೋಲ್ಕತಾಗೆ ಆಗಮಿಸಲಿರುವ ಮೋದಿ, ತಮ್ಮ ಜೀವನವನ್ನು ಬದಲಾಯಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿಯನ್ನು ಭೇಟಿಯಾಗಲಿದ್ದಾರೆ.

ಬಹುತೇಕರಿಗೆ ತಿಳಿಯದ ಸಂಗತಿಯೇನೆಂದರೆ, ಇವರು ಮೋದಿಯ ಜೀವನವನ್ನೇ ಬದಲಾಯಿಸಿದ ಸ್ವಾಮೀಜಿ. ಇಂದು ಮೋದಿ ಪ್ರಧಾನಿಯಾಗಿದ್ದಾರೆಂದರೆ ಅದಕ್ಕೆ ಮಾರ್ಗದರ್ಶನ ನೀಡಿದ್ದೇ ಕೋಲ್ಕತಾದ ಬೇಲೂರು ಮಠದ ರಾಮಕೃಷ್ಣ ಮಿಷನ್‍ನ ಸ್ವಾಮಿ ಆತ್ಮಸ್ಥಾನಂದ.

ಸ್ವಾಮಿ ವಿವೇಕಾನಂದರ ವಿಚಾರಗಳಿಗೆ ಮನಸೋತ ಯುವಕ ಮೋದಿ, 1996ರಲ್ಲಿ ಸ್ವಾಮಿ ಆತ್ಮಸ್ಥಾನಂದರ ಬಳಿ ಸನ್ಯಾಸ ಧೀಕ್ಷೆ ಕೇಳಿದ್ದರು. ಇದಕ್ಕೊಪ್ಪದ ಸ್ವಾಮೀಜಿ, ನೀನು ಜನರ ಸೇವೆ ಮಾಡಬೇಕು. ಅದರಲ್ಲೇ ಭವಿಷ್ಯವಿದೆ ಎಂದಿದ್ದರು.

ಇದರಂತೆ ಮೋದಿ ಆರ್‍ಎಸ್‍ಎಸ್‍ಗೆ ಸೇರಿ ಹಂತ ಹಂತವಾಗಿ ಜನನಾಯಕರಾಗುತ್ತಾ ಬಂದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ಸ್ವಾಮೀಜಿಯನ್ನು ಭೇಟಿ ಮಾಡಿದ್ದ ಮೋದಿ, ಮತ್ತೊಮ್ಮೆ ಬರುವುದಾಗಿ ಭಾಷೆ ನೀಡಿದ್ದರು. ಅದರಂತೆ ಕೋಲ್ಕತಾಗೆ ಬಂದಿಳಿದಾಗ ತಮ್ಮ ನೆಚ್ಚಿನ ಸ್ವಾಮೀಜಿಯನ್ನು ಭೇಟಿ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.