ಚೀನಾ ಜಾಲತಾಣದಲ್ಲಿ ಮೋದಿ ಖಾತೆ
ಚೀನಾ ಭೇಟಿ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾದ ಪ್ರಖ್ಯಾತ ಸಾಮಾಜಿಕ ಜಾಲತಾಣ `ಸಿನಾ ವೈಬೋ'ನಲ್ಲಿ ಅಕೌಂಟ್ ತೆರೆದಿದ್ದಾರೆ...

ಬೀಜಿಂಗ್: ಚೀನಾ ಭೇಟಿ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾದ ಪ್ರಖ್ಯಾತ ಸಾಮಾಜಿಕ ಜಾಲತಾಣ `ಸಿನಾ ವೈಬೋ'ನಲ್ಲಿ ಅಕೌಂಟ್ ತೆರೆದಿದ್ದಾರೆ.
ಈ ಮೈಕ್ರೋಬ್ಲಾಗ್ ಸುಮಾರು 50 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಮೋದಿ ಅವರು ಈ ಜಾಲತಾಣವನ್ನು ಸೇರಿದ ಮೊದಲ ಭಾರತೀಯ ಆಗಿದ್ದಾರೆ. ಅವರು ಮೇ 14ರಿಂದ 16ರವರೆಗೆ ಚೀನಾಗೆ ಪ್ರವಾಸ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚೀನಾದ ಜನರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಜಾಲತಾಣಕ್ಕೆ ಸೇರಿ ಕೊಂಡಿದ್ದಾರೆ.
`ಹೆಲೋ ಚೀನಾ. ವೈಬೋ ಮೂಲಕ ಚೀನಾದ ಸ್ನೇಹಿತರೊಂದಿಗೆ ಸಂವಹನ ನಡೆಸಲು ಉತ್ಸುಕನಾಗಿದ್ದೇನೆ' ಎಂದು ಮೋದಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರು `ವೈಬೋ'ದಲ್ಲಿ ಖಾತೆ ತೆರೆದ ಒಂದು ಗಂಟೆಯಲ್ಲೇ 7 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಚೀನಾದಿಂದ ಸ್ವಾಗತದ ಮಹಾಪೂರ ಹರಿದುಬಂದಿದೆ.
`ಮತ್ತೊಬ್ಬ ಅಂತಾರಾಷ್ಟ್ರೀಯ ನಾಯಕ ವೈಬೋ ಸೇರಿದ್ದಾರೆ' ಎಂದು ಒಬ್ಬರು ಪೋಸ್ಟ್ ಮಾಡಿದ್ದರೆ, ಇನ್ನೊಬ್ಬರು ಮೋದಿ ಅವರನ್ನು `ಹ್ಯಾಂಡ್‍ಸಮ್ ಎಂದು ಹೊಗಳಿದ್ದಾರೆ. ಮೋದಿ ಗುಜ ರಾತ್ ಸಿಎಂ ಆಗಿದ್ದಾಗ ಹಲವು ಬಾರಿ ಬೀಜಿಂಗ್‍ಗೆ ಭೇಟಿ ನೀಡಿದ್ದರು. ಪ್ರಧಾನಿಯಾದ ಬಳಿಕ ಮೊದಲ ಬಾರಿ ಚೀನಾಗೆ ಪ್ರವಾಸ ಹಮ್ಮಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


