ಮೂತ್ರ ಹರಿಸಿ ಗಿಡ ಬೆಳೆಸಿ: ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ದೆಹಲಿ ಬಂಗಲೆಯ ಕೈತೋಟ ಹಸಿರಿನಿಂದ ನಳನಳಿಸುತ್ತಿರುವುದರ ಹಿಂದಿನ ರಹಸ್ಯವೇನು ಗೊತ್ತೆ?...

ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ದೆಹಲಿ ಬಂಗಲೆಯ ಕೈತೋಟ ಹಸಿರಿನಿಂದ ನಳನಳಿಸುತ್ತಿರುವುದರ ಹಿಂದಿನ ರಹಸ್ಯವೇನು ಗೊತ್ತೆ?
ಅವರು ತೋಟಕ್ಕೆ ನೀರಿನ ಬದಲಿಗೆ ತಮ್ಮ ಮೂತ್ರವನ್ನೇ ಹರಿಸಿ ಗಿಡಗಳನ್ನು ಪೋಷಿಸುತ್ತಿದ್ದಾರೆ. ಇದು ಗಾಳಿಸುದ್ದಿಯೋ ಕುಚೋದ್ಯವೋ ಅಲ್ಲ. ಅವರೇ ಬಹಿರಂಗಪಡಿಸಿದ ಸತ್ಯ. ನಾಗಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತ ಗಡ್ಕರಿ, ಮೂತ್ರದಂಥ ಅಗ್ಗದ ಗೊಬ್ಬರ ಇನ್ನೊಂದಿಲ್ಲ. ಹಾಗಾಗಿ ತಾವು ಪ್ರತಿದಿನ ತಮ್ಮ ಗಾರ್ಡನ್‍ನ ಗಿಡಗಳಿಗೆ ಮೂತ್ರಧಾರೆ ಎರೆಯುವುದಾಗಿ ಹೇಳಿಕೊಂಡು ಭಾರಿ ವಿವಾದಕ್ಕೆ ಎಡೆಮಾಡಿ ಕೊಟ್ಟಿದ್ದಾರೆ.
ಈಗಾಗಲೇ ಟ್ವಿಟರ್ ಮತ್ತು ಫೇಸ್‍ಬುಕ್‍ನಲ್ಲಿ ಈ ಹೇಳಿಕೆಗೆ ಅಪಾರ ಸಂಖ್ಯೆಯಲ್ಲಿ ವಿರೋಧಗಳು ಹರಿದು ಬಂದಿದ್ದು, ಗಡ್ಕರಿ ಮಾತು ಗೇಲಿಗೊಳಗಾಗಿದೆ. 50ಲೀಟರಿನ ಕ್ಯಾನಿನಲ್ಲಿ ತಮ್ಮ ಮೂತ್ರ ಶೇಖರಿಸಿಟ್ಟಿದ್ದ ಗಡ್ಕರಿ, ಅದನ್ನೇ ಗಿಡಗಳಿಗೆ ಹರಿಸಿದ್ದರಿಂದ, ಗಿಡಗಳ ಬೆಳವಣಿಗೆಯಲ್ಲಿ ವೇಗ ಕಂಡುಬಂದಿದೆ ಎಂದೂ ಅವರು ಸಮರ್ಥಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


